Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಲ್ನಾಡು: ಹಣ್ಣು ತುಂಬಿದ ಮಿನಿ ಗೂಡ್ಸ್ ಟೆಂಪೋಗೆ ಕಾರು ಡಿಕ್ಕಿ; ಪಲ್ಟಿಯಾದ ಪರಿಣಾಮ ಐವರಿಗೆ ಗಂಭೀರ ಗಾಯ!

Spread the love

ಮಂಗಳೂರು: ಹಣ್ಣು ತುಂಬಿದ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮತ್ತು ಮಿನಿ ಗೂಡ್ಸ್ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸೇರಿದಂತೆ ಐದು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ನಾಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗಾಯಗೊಂಡವರನ್ನು ಸಂಪತ್ ಶೆಟ್ಟಿ (69), ಮಮತಾ ಶೆಟ್ಟಿ, ಸುಮಿತ್ರಾ (28), ಟೆಂಪೋ ಚಾಲಕ ಬಶೀರ್ (42) ಮತ್ತು ಆಸಿಫ್ (23) ಎಂದು ಗುರುತಿಸಲಾಗಿದೆ.ಬೆಂಗಳೂರಿನಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಕೊಲ್ನಾಡು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ಕಾರು ಸ್ಕಿಡ್ ಆಗಿ, ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ವರದಿಯಾಗಿದೆ.ಡಿಕ್ಕಿಯ ತೀವ್ರತೆಗೆ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದಿದ್ದು, ಟೆಂಪೋದ ಮೇಲಿನ ಭಾಗ ಕಿತ್ತು ಹೆದ್ದಾರಿ ವಿಭಜಕದ ಮೇಲೆ ಬಿದ್ದಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು.ಅಪಘಾತದಿಂದಾಗಿ ಹೆದ್ದಾರಿ ಸಂಚಾರಕ್ಕೆ ಸ್ವಲ್ಪ ಸಮಯ ಅಡ್ಡಿಯುಂಟಾಯಿತು. ನಂತರ ಕ್ರೇನ್ ಬಳಸಿ ಕಾರನ್ನು ಸ್ಥಳದಿಂದ ತೆಗೆದುಹಾಕಲಾಯಿತು.


Spread the love
Share:

administrator

Leave a Reply

Your email address will not be published. Required fields are marked *