Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಲ್ಕತ್ತಾ: ಕಾರು ಚಾಲನೆ ಅಭ್ಯಾಸ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕೊಳಕ್ಕೆ ಉರುಳಿದ ಮಹಿಳೆ ಸಾ*ವು!

Spread the love

ಕೋಲ್ಕತ್ತಾ : ಚಾಲನೆ ಅಭ್ಯಾಸ ಮಾಡುತ್ತಿದ್ದಾಗ ಕಾರಿನ ನಿಯಂತ್ರಣ ತಪ್ಪಿ ಕೊಳಕ್ಕೆ ಉರುಳಿ 42 ವರ್ಷದ ಮಹಿಳೆಯೊಬ್ಬರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲ್ಕತ್ತಾದ ಕೆಸ್ತೋಪುರದ ಪ್ರಫುಲ್ಲ ಕಾನನ್ (ಪಶ್ಚಿಮ) ಪ್ರದೇಶದಲ್ಲಿ ಬುಧವಾರ ನಡೆದಿದೆ. ಮೃತರನ್ನು ಕೆಸ್ತೋಪುರ ನಿವಾಸಿ ಸುಮಿತ್ರಾ ದಾಸ್ (42) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಿಗ್ಗೆ ಸುಮಿತ್ರಾ ಅವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಗೆ ಬಿಟ್ಟು ಮನೆಗೆ ಮರಳಿದ್ದರು. ಬಳಿಕ ಸ್ಕೂಟರ್ ನಿಲ್ಲಿಸಿ, ಗ್ಯಾರೇಜ್‌ನಲ್ಲಿದ್ದ ಹುಂಡೈ ಇಯಾನ್ ಕಾರನ್ನು ಹೊರತೆಗೆದು ಚಾಲನೆ ಅಭ್ಯಾಸ ಮಾಡಲು ಹೊರಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬ್ರೇಕ್ ತುಳಿಯುವ ಬದಲು ಆಕ್ಸಿಲರೇಟರ್ ಒತ್ತಿದ್ದರಿಂದ, ಕಾರು ವೇಗವಾಗಿ ನಿಯಂತ್ರಣ ತಪ್ಪಿ ಸಮೀಪದ ಕೊಳದ ಮಧ್ಯಭಾಗಕ್ಕೆ ಉರುಳಿದೆ. ಕಾರು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರಿಂದ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಸುಮಿತ್ರಾ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಸಿ ಕಾರನ್ನು ನೀರಿನಿಂದ ಹೊರತೆಗೆದರು.

ಕಾರನ್ನು ಕೊಳದಿಂದ ಮೇಲೆತ್ತಿದಾಗ ಸುಮಿತ್ರಾ ಅವರ ಮೃತದೇಹ ಕಾರಿನೊಳಗೆ ಪತ್ತೆಯಾಗಿದೆ. ಆಕೆಯ ಮುಖ ಹಿಂಭಾಗದ ಹ್ಯಾಚ್‌ ಬಾಗಿಲಿನತ್ತ ಹಾಗೂ ಕಾಲುಗಳು ಸ್ಟೀರಿಂಗ್ ವೀಲ್ ಬಳಿ ಇದ್ದವು. ಕಾರು ಮುಳುಗುತ್ತಿದ್ದಂತೆ ಜೀವ ಉಳಿಸಿಕೊಳ್ಳಲು ಆಕೆ ಹಿಂಭಾಗದಿಂದ ಹೊರಬರಲು ಹತಾಶ ಯತ್ನ ನಡೆಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಸುಮಿತ್ರಾ ಅವರ ಪತಿ ಕೃಷ್ಣೇಂದು ದಾಸ್ ಇತ್ತೀಚೆಗಷ್ಟೇ ಈ ಕಾರನ್ನು ಖರೀದಿಸಿದ್ದರು. ಆಗಸ್ಟ್ 22 ರಂದು ನಿಗದಿಯಾಗಿದ್ದ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪರೀಕ್ಷೆಗಾಗಿ ಸುಮಿತ್ರಾ ಅಭ್ಯಾಸ ಮಾಡುತ್ತಿದ್ದರು. ಅನನುಭವ ಹಾಗೂ ಗಾಬರಿಯಿಂದಾಗಿ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ್ದೇ ಈ ದುರಂತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *