Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಸರಗೋಡು: ಚೆರ್ಕಳ ಬೇವಿಂಜೆ ಬಳಿ ಲಾರಿ ಪಲ್ಟಿ; ಕ್ಯಾಬಿನ್‌ನಲ್ಲಿ ಸಿಲುಕಿದ್ದ ಚಾಲಕ ಪವಾಡಸದೃಶ ಪಾರು!

Spread the love

ಕಾಸರಗೋಡು: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಚೆರ್ಕಳ ಬೇವಿಂಜೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಚಾಲಕ ತಮಿಳುನಾಡು ಮೂಲದ ಸಿದ್ದಿಕ್ (೪೧) ಕ್ಯಾಬಿನ್ನೊಳಗೆ ಸಿಲುಕಿಕೊಂಡಿದ್ದರು. ವಿದ್ಯಾನಗರ ಪೊಲೀಸರು ಹಾಗೂ ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಹೈಡ್ರಾಲಿಕ್ ಕಟ್ಟರ್ ಬಳಸಿ ವಾಹನದ ಭಾಗಗಳನ್ನು ಕತ್ತರಿಸಿ, ಚಾಲಕನನ್ನು ಸುರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾದರು.ಚಾಲಕ ಸಿದ್ದಿಕ್ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾನೆ. ಅಪಘಾತದ ತೀವ್ರತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಯ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.


Spread the love
Share:

administrator

Leave a Reply

Your email address will not be published. Required fields are marked *