ಕದ್ರಿ ಶ್ರೀ ಯೋಗೇಶ್ವರ ಮಠದ ಮಹಾಯಾಗ ಎರಡನೇ ದಿನಕ್ಕೆಭಕ್ತಿಪರವಶ ಮೂಡಿಸಿದ ಭಜನಾ ಸಂಕೀರ್ತನೆ!

ಮಂಗಳೂರು: ನಗರದ ಕದ್ರಿ ಮರದ ಶ್ರೀ ಯೋಗೇಶ್ವರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಜರುಗುತ್ತಿರುವ ಐದು ದಿನಗಳ ಬೃಹತ್ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ವು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಠದ ಆವರಣದಲ್ಲಿ ವೈದಿಕ ಕಳೆ ಗಟ್ಟಿಗೊಂಡಿದೆ.

ಯಾಗಶಾಲೆಯಲ್ಲಿ ನಿತ್ಯದಂತೆ ವೈವಿಧ್ಯಮಯ ಹೋಮ-ಹವನಗಳು, ಮಂತ್ರಪಠಣ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ಭಕ್ತಿ-ಶ್ರದ್ಧೆಯಿಂದ ನೆರವೇರುತ್ತಿವೆ. ಯಾಗದ ದಿವ್ಯ ವಾತಾವರಣವು ಭಕ್ತರ ಮನಸ್ಸಿಗೆ ಅಪಾರ ಶಾಂತಿಯನ್ನು ನೀಡುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಾದಿಗಳು ಯಾಗದ ಫಲಾನುಗಳಾಗುತ್ತಿದ್ದಾರೆ.
ಈ ಧಾರ್ಮಿಕ ಮಹೋತ್ಸವದ ವಿಶೇಷ ಅಂಗವಾಗಿ ಇಂದು ಭಜನಾ ಸಂಕೀರ್ತನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು. ಮಠದ ಸನ್ನಿಧಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಭಜನಾ ತಂಡಗಳು ಹಾಗೂ ಭಕ್ತರು ಭಾಗವಹಿಸಿ ದೈವ ಸ್ಮರಣೆಗೈದರು. ಮಂತ್ರಘೋಷಗಳ ಜೊತೆಗೆ ಭಜನಾ ಸಂಕೀರ್ತನೆಯು ಇಡೀ ಪರಿಸರವನ್ನು ಭಕ್ತಿಪರವಶವಾಗಿಸಿದೆ.
ಉತ್ತರ ಪ್ರದೇಶದ ವಾರಣಾಸಿಯ (ವಿಂಧ್ಯಾಚಲ) ಪ್ರಸಿದ್ಧ ಪುರೋಹಿತರಾದ ಆಚಾರ್ಯ ಶ್ರೀ ಲವಕುಶ್ ಮಿಶ್ರಾಜಿ ಅವರ ದಿವ್ಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಮುಂದುವರಿದಿವೆ. ಜಗದಾಚಾರ್ಯ ಸ್ವಾಮಿ ಅಖಿಲೇಶ್ಜೀ ಮಹಾರಾಜ್ ಸೇವಾ ಸಂಸ್ಥಾನ (ರಿ.) ಹಾಗೂ ದ ಸ್ಯಾಫ್ರನ್ ಫ್ರಂಟ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಹಾಯಾಗದಲ್ಲಿ ಮುಂದಿನ ದಿನಗಳಲ್ಲೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.
ಪ್ರಸಿದ್ಧ ಭಜನಾ ತಂಡಗಳು
ತಾ 25/08/2026 ಮಂಗಳವಾರ
ಮಧ್ಯಾಹ್ನ 12 ರಿಂದ 1:30ರ ವರೆಗೆ ಸಂಕೀರ್ತನಾಈ ಸೇವೆ ಶ್ರೀ ಆದಿಲಕ್ಷ್ಮೀ ಭಜನಾ ಮಂಡಳಿ ಶಕ್ತಿನಗರ
ತಾ 26/08/2026 ಗುರುವಾರ
ಮಧ್ಯಾಹ್ನ 1:30ರಿಂದ 2:30 ರ ವರೆಗೆ ಸಂಕೀರ್ತನಾ ಸೇವೆ ಶ್ರೀ ಬಲಮುರಿ ಸಿದ್ದಿ ವಿನಾಯಕ ಭಜನಾ ಮಂಡಳಿ, ಬಿಕರ್ಣಕಟ್ಟೆ
ಶ್ರೀ ವಿವೇಕ ಭಕ್ತ ವೃಂದ ಮಂಗಳೂರು
ಶ್ರೀಮತಿ ಜಲಜಾಕ್ಷಿ ತೇಜ್ಪಾಲ್ ಮತ್ತು ಬಳಗ ಮಂಗಳೂರು
ಶ್ರೀ ಶಾರದಾ ಮಹಿಳಾ ಮಂಡಲ (ರಿ.) ಚಿಲಿಂಬಿ, ಮಂಗಳೂರು
ಶ್ರೀ ಮಹಾದೇವಿ ಭಜನಾ ಮಂಡಳಿ ಕಾವೂರು