Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇವ್ ಡೈವಿಂಗ್ ವೇಳೆ ಘೋರ ದುರಂತ; ಇಟಲಿಯ ಐವರು ವಿಜ್ಞಾನಿಗಳು, ಸಂಶೋಧಕರು ಸಾ*ವು

Spread the love

ಮಾಲ್ಮೀಮ್ಸ್: ಕೇವ್ ಸ್ಕೂಬಾ ಡೈವಿಂಗ್ ಮಾಡುವಾಗ ಐವರು ಇಟಲಿ ಪ್ರಜೆಗಳು ಮೃತಪಟ್ಟಿರುವ ಘಟನೆ ಗುರುವಾರ ಮಾಲ್ಮೀಮ್ಸ್ ನಲ್ಲಿ ನಡೆದಿದ್ದು, ಮಾಲ್ಮೀಲ್ಸ್ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಡೈವಿಂಗ್ ಅಪಘಾತ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಈವರೆಗೆ ಕೇವಲ ಒಂದು ಮೃತದೇಹವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದು, ಹವಾಮಾನ ವೈಪರೀತ್ಯದಿಂದ ಉಳಿದ ಮೃತದೇಹಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನಗಳಿಗೆ ತೊಡಕುಂಟಾಗಿದೆ.
ಐವರು ಡೈವರ್ ಗಳು ವಾವು ಅಟಾಲ್ ನಲ್ಲಿ 50 ಮೀಟರ್ ಆಳದಲ್ಲಿ ನೀರಿನೊಳಗಿರುವ ಗುಹೆಗಳನ್ನು ಶೋಧಿಸುವ ಸಲುವಾಗಿ ನೀರಿಗೆ ಜಿಗಿದಿದ್ದರು. ಆದರೆ, ಅವರು ಮತ್ತೆ ನೀರಿನಿಂದ ಹೊರಗೆ ಬಂದಿಲ್ಲ ಎಂದು ಹೇಳಲಾಗಿದೆ. ಅವರು ಸಾವಿನ ಕಾರಣಗಳ ಕುರಿತು ತನಿಖೆ ನಡೆಯುತ್ತಿದೆ. ಶನಿವಾರ ಮೃತದೇಹಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿಯುತ್ತದೆಂದು ನಿರೀಕ್ಷಿಸಲಾಗಿದೆ.

ಮೃತರನ್ನು ಮೋನಿಕಾ ಮಾಂಟೆಫಾಲೈನ್, ಜಾರ್ಜಿಯಾ ಸೊಮ್ಮಕಾಲ್, ಫೆಡೆರಿಕೊ ಗ್ವಾಲ್ವಿಯರಿ, ಮುರಿಯೆಲ್ ಒಡ್ಡೆನಿನೊ ಮತ್ತು ಗಿಯಾನ್ಗುಚ ಬೆನೆಡೆಟ್ಟಿ ಎಂದು ಗುರುತಿಸಲಾಗಿದೆ.
ಮೃತರ ಪೈಕಿ ನಾಲ್ಕು ಮಂದಿ ಬೆನೆಡೆಟ್ಟಿಯ ಜಿನೋವಾ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿದ್ದರು. ಐದನೆಯ ವ್ಯಕ್ತಿ ಡ್ಯೂಕ್ ಆಫ್ ಆರ್ಕ್ ದೋಣಿಯ ಚಾಲಕರಾಗಿದ್ದರು. ಇದುವರೆಗೆ ಅವರ ಮೃತದೇಹ ಮಾತ್ರ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮೃತರ ಪೈಕಿ ಮಾಂಟೆಫಾಲ್ಲೋನ್, ಜಿನೋವಾ ವಿಶ್ವವಿದ್ಯಾಲಯದಲ್ಲಿ ಸಾಗರ ಜೀವವಿಜ್ಞಾನ, ಉಷ್ಣವಲಯ ಸಮುದ್ರದ ಪರಿಸರ ವಿಜ್ಞಾನ ಮತ್ತು ಆಳಸಮುದ್ರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ. ಅವರು ಮಾಲ್ಮೀಲ್ಸ್ ನ ದ್ವೀಪವೊಂದರ ನಿಗಾವಣೆ ಅಭಿಯಾನದ ವೈಜ್ಞಾನಿಕ ನಿರ್ದೇಶಕರಾಗಿದ್ದರು ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.

ಅವರ ಪುತ್ರಿ ತಮ್ಮ ತಾಯಿಯಂತೆಯೇ ಸಮುದ್ರ ಮತ್ತು ಡೈವಿಂಗ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು ಹಾಗೂ ಅದೇ ‘ವಿಶ್ವವಿದ್ಯಾಲಯದಲ್ಲಿ ಜೈವಿಕ ವೈದ್ಯಕೀಯ ಇಂಜಿನಿಯರಿಂಗ್ ನಲ್ಲಿ ಪದವಿ ಪೂರೈಸಿದ್ದರು ಎಂದು ‘Daily Mail’ ವರದಿ ಮಾಡಿದೆ.
ಉಳಿದಂತೆ 31 ವರ್ಷದ ಒಡ್ಡೆನಿನೊ ಸಾಗರ ಜೀವವಿಜ್ಞಾನ ಮತ್ತು ಪರಿಸರ ವಿಜ್ಞಾನಿಯಾಗಿದ್ದರೆ, 31 ವರ್ಷದ ಗ್ವಾಲ್ವಿಯರಿ ಅದೇ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸಾಗರ ಜೀವವಿಜ್ಞಾನ ಮತ್ತು ಪರಿಸರ ವಿಜ್ಞಾನದಲ್ಲಿ ಪದವಿ ಪಡೆದಿದ್ದರು ಹಾಗೂ ಅವರು ಮಾನ್ಯತೆ ಹೊಂದಿದ್ದ ಸ್ಕೂಬ್ ಡೈವಿಂಗ್ ತರಬೇತುದಾರರಾಗಿದ್ದರು. 44 ವರ್ಷದ ಬೆನೆಡೆಟ್ಟಿ ಬ್ಯಾಂಕಿಂಗ್ ಮತ್ತು ಹಣಕಾಸು ವೃತ್ತಿಪರರಾಗಿದ್ದರು ಎಂದು ವರದಿಯಾಗಿದೆ.
ಈ ಐವರು ಮೃತ್ಯುಗೆ ವಿವಿಧ ಕಾರಣಗಳನ್ನು ಶಂಕಿಸಲಾಗುತ್ತಿದ್ದು ಅವರ ಸಾವಿನಲ್ಲಿ ವಿಷಪೂರಿತ ಆಮ್ಲಜನಕದ ಪಾತ್ರವಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *