ಬಾಂಗ್ಲಾದೇಶದ ಫೈರಿಂಗ್ ರೇಂಜ್‌ನಲ್ಲಿ ಭೀಕರ ದುರಂತ: ಚೀನಾ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸೈನಿಕರ ಸಾ*ವು!

ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿರುವ ಹತಜಾರಿ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಬುಧವಾರ ನಡೆದ ಫೀಲ್ಡ್ ಫೈರಿಂಗ್ ವ್ಯಾಯಾಮದ ಸಮಯದಲ್ಲಿ ಚೀನಾ ಮೂಲದ ಟೈಪ್ 59 ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಇಬ್ಬರು ಬಾಂಗ್ಲಾದೇಶ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂತರ-ಸೇವೆಗಳ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ISPR) ಪ್ರಕಾರ, ವ್ಯಾಯಾಮದ ಸಮಯದಲ್ಲಿ ಸೈನಿಕರು ಟ್ಯಾಂಕ್‌ನಿಂದ ಗುಂಡು ಹಾರಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಇಬ್ಬರು ಸೈನಿಕರು ಸಾವು, ಅಧಿಕಾರಿಗೆ ಗಂಭೀರ ಗಾಯ
ಅಪಘಾತದಲ್ಲಿ ಟ್ಯಾಂಕ್ ಒಳಗಿದ್ದ ಇಬ್ಬರು ಸೈನಿಕರು ಸಾವನ್ನಪ್ಪಿದ್ದು, ಬಾಂಗ್ಲಾದೇಶ ಸೇನಾ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಗಾಯಗೊಂಡ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಗೆ (ಸಿಎಂಹೆಚ್) ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತಿದೆ.ಚೈನೀಸ್ ಮೂಲದ ಟೈಪ್ 59 ಟ್ಯಾಂಕ್ ಸ್ಫೋಟ
ಅಪಘಾತಕ್ಕೀಡಾದ ಟ್ಯಾಂಕ್ ಬಾಂಗ್ಲಾದೇಶ ಸೇನೆಯು ಬಳಸುತ್ತಿದ್ದ ಚೀನಾ ಮೂಲದ ಟೈಪ್ 59 ಎಂದು ವರದಿಯಾಗಿದೆ.
ಚಟ್ರೋಗ್ರಾಮ್ ನ ಹತಜಾರಿ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಗುಂಡಿನ ವ್ಯಾಯಾಮದ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಅಪಘಾತಕ್ಕೆ ನಿಖರವಾದ ಕಾರಣ ದೃಢಪಟ್ಟಿಲ್ಲ.
ಅಪಘಾತದ ಕಾರಣವನ್ನು ನಿರ್ಧರಿಸಲು ಅಗತ್ಯ ಕ್ರಮಗಳು ನಡೆಯುತ್ತಿವೆ ಎಂದು ISPR ತಿಳಿಸಿದೆ.
ಸ್ಪೋಟಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಿಲ್ಲ.
