Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಕ್ರೇನ್ ಮೇಲೆ ರಶ್ಯಾದ ಭೀಕರ ಕ್ಷಿಪಣಿ ದಾಳಿ: 19 ಮಂದಿ ಸಾ*ವು, ತತ್ತರಿಸಿದ ಕೀವ್ ನಗರ!

Spread the love

ಕೀವ್: ರಶ್ಯ ಸೋಮವಾರ ಬೆಳಗ್ಗೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ಕ್ಷಿಪಣಿ ಮತ್ತು ಡೋನ್‌ಗಳ ಮೂಲಕ ಭೀಕರ ದಾಳಿ ನಡೆಸಿದ್ದು, ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಮತ್ತು ಹಲವಾರು ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ನಗರದಾದ್ಯಂತ 46 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ರಶ್ಯವು 23 ಬ್ಯಾಲಿಸ್ಟಿಕ್ ಮತ್ತು ಆರು ಹೈಪಾನಿಕ್ ಕ್ಷಿಪಣಿಗಳು ಸೇರಿದಂತೆ ಒಟ್ಟು 68 ಕ್ಷಿಪಣಿಗಳನ್ನು ಮತ್ತು 351 ಡೋನ್‌ಗಳನ್ನು ಬಳಸಿದೆ. 37 ಕ್ಷಿಪಣಿಗಳನ್ನು ಮತ್ತು 326 ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಆದರೆ ಯಾವುದೇ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಸೂಪ‌ರ್ ಮತ್ತು ಹೈಪಾನಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಧ್ಯವಾಗಿಲ್ಲ. ದಾಳಿಯಲ್ಲಿ ಕನಿಷ್ಠ 15 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ಉಕ್ರೇನ್ ರಾಜಧಾನಿ ಕೀವ್ ಮತ್ತು ಸುತ್ತಮುತ್ತಲಿನ ಪ್ರದೇಶದ ಮಿಲಿಟರಿ ಮತ್ತು ಇಂಧನ ಸೌಲಭ್ಯಗಳು ಹಾಗೂ ಮಿಲಿಟರಿ ವಾಯುನೆಲೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ರಶ್ಯ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *