Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗುಜರಾತ್‌ನಲ್ಲಿ ಘೋರ ಕೃತ್ಯ: ಇಷ್ಟವಿಲ್ಲದ ಕಾರಣಕ್ಕೆ ಸ್ವಂತ ಹೆಂಡತಿಯನ್ನೇ ₹50 ಸಾವಿರಕ್ಕೆ ಮಾರಿದ ಪತಿ ಸೇರಿ 7 ಮಂದಿ ಅರೆಸ್ಟ್!

Spread the love

ಗುಜರಾತ್ : ಸ್ವಂತ ಹೆಂಡತಿಯನ್ನೇ ಇಷ್ಟವಿಲ್ಲದ ಕಾರಣಕ್ಕೆ ಕೇವಲ 50,000 ರೂಪಾಯಿಗೆ ಮಾರಾಟ ಮಾಡಿ, ಆಕೆಯ ಮೇಲೆ ಭೀಕರ ಲೈಂಗಿಕ ದೌರ್ಜನ್ಯ ಎಸಗಲು ಕಾರಣನಾದ ಪತಿ ಸೇರಿದಂತೆ ಏಳು ಜನ ಆರೋಪಿಗಳನ್ನು ಗುಜರಾತ್‌ನ ಬನಸ್ಕಂತ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಸಂತ್ರಸ್ತ ಮಹಿಳೆಯನ್ನು ಆಕೆಯ ಪತಿ ನಿಕೇಶ್‌ಭಾಯ್ ವನ್ಲಾಲ್‌ಭಾಯ್ ಪಟೇಲ್ ಎಂಬಾತನೇ ಮಾನವ ಕಳ್ಳಸಾಗಣೆ ಜಾಲಕ್ಕೆ ಮಾರಾಟ ಮಾಡಿದ್ದ ಆಘಾತಕಾರಿ ಸತ್ಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಮೇ 11, 2026 ರಂದು ಆರೋಪಿ ನಿಕೇಶ್‌ಭಾಯ್ ಪಟೇಲ್ ಪಾಲನ್ಪುರದ ತನ್ನ ನಿವಾಸದಿಂದ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಪಾಲನ್ಪುರ ನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಆದರೆ, ದೂರು ನೀಡಿದ ಕೇವಲ ಎರಡು ದಿನಗಳಲ್ಲೇ ಪತಿ ನಿಕೇಶ್ ಕೂಡ ಹಠಾತ್ತನೆ ನಾಪತ್ತೆಯಾಗಿದ್ದನು. ಇದರ ಬೆನ್ನಲ್ಲೇ ಆತನ ತಂದೆ ಪಾಲನ್ಪುರ ಪೂರ್ವ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿದ್ದಾನೆ ಎಂದು ಮತ್ತೊಂದು ದೂರು ನೀಡಿದ್ದರು.

ಬನಸ್ಕಾಂತ ಪೊಲೀಸ್ ಮಹಾನಿರ್ದೇಶಕ ಅಕ್ಷಯ್ರಾಜ್ ಮಕ್ವಾನಾ ಅವರ ಮಾರ್ಗದರ್ಶನದಲ್ಲಿ ತಾಂತ್ರಿಕ ಕಣ್ಗಾವಲು ಹಾಗೂ ಮಾನವ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಅಸಲಿ ಕಥೆ ಹೊರಬಂದಿದೆ. ವಿಚಾರಣೆ ವೇಳೆ ಆರೋಪಿ ಪತಿ, ತನಗೆ ಹೆಂಡತಿಯನ್ನು ಕಂಡರೆ ಇಷ್ಟವಿರಲಿಲ್ಲ, ಹಾಗಾಗಿ ಆಕೆಯನ್ನು ಶಾಶ್ವತವಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದಕ್ಕಾಗಿ ತನ್ನ ಸಹಚರರಾದ ಸಂಜಯ್ ಠಾಕೂರ್, ಅಶೋಕ್ ಠಾಕೂರ್ ಮತ್ತು ಸಚಿನ್ ದರ್ಬಾರ್ ಜೊತೆ ಸೇರಿ ಕೇವಲ ₹50,000 ಹಣಕ್ಕೆ ಆಕೆಯನ್ನು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದನು.

ಪೊಲೀಸರಿಂದ ರಕ್ಷಿಸಲ್ಪಟ್ಟ ಮಹಿಳೆಯು ತನಗಾದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾಳೆ. ತನ್ನನ್ನು ಕಳ್ಳಸಾಗಣೆ ಮಾಡಿದ ದುಷ್ಕರ್ಮಿಗಳು ಒಂದು ಕಡೆ ಕೂಡಿಹಾಕಿ, ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಆಕೆಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಬಲವಂತವಾಗಿ ಕಸಿದುಕೊಂಡು ಸ್ಥಳೀಯ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ. ಮಹಿಳೆಯ ಈ ಆಘಾತಕಾರಿ ಹೇಳಿಕೆಯ ಬಳಿಕ ಪೊಲೀಸರು ಮಾನವ ಕಳ್ಳಸಾಗಣೆ, ವಂಚನೆ, ಕ್ರಿಮಿನಲ್ ಪಿತೂರಿ ಸೇರಿದಂತೆ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಏಳು ಜನರನ್ನು ಜೈಲಿಗಟ್ಟಿದ್ದಾರೆ. ಮುಖ್ಯ ಆರೋಪಿ ನಿಕೇಶ್ ಪಟೇಲ್ ಹಳೆಯ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಮದುವೆಯಾಗಿದ್ದರೂ ಮಹಿಳೆಯರಿಗೆ ಆಮಿಷವೊಡ್ಡಿ ಅಪಹರಿಸಿದ ಹಲವು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದು, ತನಿಖೆ

ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *