Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾಕಿ ವಿಶ್ವಕಪ್: 16 ವರ್ಷಗಳ ಬಳಿಕ ಇಂದು ಮುಖಾಮುಖಿಯಾಗಲಿರುವ ಸಾಂಪ್ರದಾಯಿಕ ಎದುರಾಳಿಗಳು; ಭಾರತ-ಪಾಕ್ ಹೈವೋಲ್ಟೇಜ್ ಕದನ!

Spread the love

ಆಮ್‌ಸ್ಟೆಲ್ವಿನ್: 16 ವರ್ಷಗಳ ಬಳಿಕ ಹಾಕಿ ವಿಶ್ವಕಪ್‌ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿವೆ. ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಇದೇ ಮೈದಾನದಲ್ಲಿ 1973ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ್ದವು. ಆ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಗೆದ್ದಿತ್ತು. 62ನೇ ನಿಮಿಷದಲ್ಲಿ ಬಿ.ಪಿ. ಗೋವಿಂದ ಭಾರತದ ಪರ ಗೆಲುವಿನ ಗೋಲು ಬಾರಿಸಿದ್ದರು. ಇದೀಗ 53 ವರ್ಷಗಳ ಬಳಿಕ ಇದೇ ಮೈದಾನದಲ್ಲಿ ಮತ್ತೆ ಉಭಯ ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ.ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿ 2010ರ ವಿಶ್ವಕಪ್‌ ವೇಳೆ ನವದೆಹಲಿಯಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ರಾಜ್‌ಪಾಲ್ ಸಿಂಗ್ ನಾಯಕತ್ವದ ಭಾರತ ತಂಡ ಪಾಕಿಸ್ತಾನವನ್ನು 4-1 ಗೋಲುಗಳಿಂದ ಸೋಲಿಸಿತ್ತು.ಇದೀಗ 16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಮತ್ತೆ ಈ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದ್ದು, ಅದೇ ಆತ್ಮವಿಶ್ವಾಸದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಹಾಕಿ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಇದುವರೆಗೆ 5 ಬಾರಿ ಮುಖಾಮುಖಿಯಾಗಿವೆ. 1971, 1973, 1975, 1986 ಹಾಗೂ 2010ರಲ್ಲಿ ಈ ಪಂದ್ಯಗಳು ನಡೆದಿವೆ. ಈ ಐದು ಪಂದ್ಯಗಳಲ್ಲಿ ಭಾರತ 3 ಬಾರಿ ಗೆದ್ದಿದ್ದರೆ, ಪಾಕಿಸ್ತಾನ 2 ಪಂದ್ಯಗಳಲ್ಲಿ ಗೆದ್ದಿದೆ.16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಭಾರತ-ಪಾಕ್ ಕದನ. ಒಂದು ಕಡೆ ಭಾರತದ ಮುಂದಿನ ಹಂತದ ಟಿಕೆಟ್, ಮತ್ತೊಂದು ಕಡೆ ಪಾಕಿಸ್ತಾನದ ಪಾಲಿಗೆ ಅವಕಾಶದ ಬಾಗಿಲು. ಒಟ್ಟಾರೆ ಇಂದಿನ ರೋಚಕ ಪಂದ್ಯವನ್ನು ವೀಕ್ಷಿಸಲು ಹಾಕಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *