Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯೂರೋಪ್‌ನಲ್ಲಿ ಬಿಸಿಲ ಝಳದ ಅಟ್ಟಹಾಸ: ಫ್ರಾನ್ಸ್‌ನಲ್ಲಿ 1000ಕ್ಕೂ ಹೆಚ್ಚು ಸಾವು!

Spread the love

ಫ್ರಾನ್ಸ್: ಬಿಸಿಲ ಬೇಗೆಯಿಂದ ಇಡೀ ಯೂರೋಪ್ ಖಂಡ ತತ್ತರಿಸಿದ್ದು, ಹಲವು ದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿದ್ದು, ತಾಪಮಾನದ ಹೊಸ ದಾಖಲೆ ಈ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ.
ಸ್ಕ್ಯಾಂಡಿನೇವಿಯಾ ಮತ್ತು ಅಲ್‌ಪ್ರೆಸ್ ನಲ್ಲಿ ದಾಖಲೆ ತಾಪಮಾನ ದಾಖಲಾಗಿದ್ದು, ಇಟೆಲಿಯಲ್ಲಿ ತುರ್ತು ಮುನ್ನೆಚ್ಚರಿಕೆ ನೀಡಲಾಗಿದೆ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ತುರ್ತು ಸ್ಪಂದನೆ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ. ಹವಾಮಾನ ವೈಪರೀತ್ಯದಿಂದಾಗಿ ವ್ಯಾಪಕ ಸಾವು ನೋವು, ಮೂಲಸೌಕರ್ಯದ ಮೇಲೆ ಒತ್ತಡದ ವಾತಾವರಣ ಇದ್ದು ಹೆಚ್ಚುತ್ತಿರುವ ತಾಪಮಾನದಿಂದ ಪಾರಾಗುವ ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಇಡೀ ಯೂರೋಪ್ ಖಂಡಕ್ಕೆ ಬಿಸಿಲ ಬೇಗೆ ಕಾಡುತ್ತಿದ್ದು, ಫ್ರಾನ್ಸ್ ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಬಹುತೇಕ ಮಂದಿ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು. ಜರ್ಮನಿಯಲ್ಲಿ ಸರ್ವಕಾಲಿಕ ದಾಖಲೆ ಎನಿಸಿದ 41.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸ್ಕ್ಯಾಂಡಿನೇವಿಯಾದಿಂದ ಅಲ್‌ಪ್ರೆಸ್ ವರೆಗೂ ಯೂರೋಪ್‌ನಾದ್ಯಂತ ಬಿಸಿಲ ಝಳ ವ್ಯಾಪಿಸಿದ್ದು, 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಹಲವು ಮಂದಿ ಬಿಸಿಲ ಝಳಕ್ಕೆ ಬಲಿಯಾಗಿದ್ದಾರೆ.
ಸ್ವಿಡ್ಡರೆಂಡ್‌ನಲ್ಲಿ ಹಿಮಗುಡ್ಡೆಗಳು ಕರಗುತ್ತಿದ್ದು ಧೀರ್ಘಾವಧಿಯಲ್ಲಿ ನೀರು ಮತ್ತು ಹವಾಮಾನದ ಪರಿಣಾಮದ ಬಗ್ಗೆ ಆತಂಕ ಮೂಡಿದೆ. ಡೆನ್ಮಾರ್ಕ್‌ನಲ್ಲಿ ದಾಖಲೆ ಉಷ್ಣಾಂಶ ದಾಖಲಾಗಿದ್ದು, ಜರ್ಮನಿ ಪೊಲೀಸರು ಬರ್ಲಿನ್‌ನಲ್ಲಿ ಸಾರ್ವಜನಿಕರಿಗೆ ನೆರವಾಗಲು ಜಲಫಿರಂಗಿಗಳ ಮೂಲಕ ನೀರೆರಚುತ್ತಿದ್ದಾರೆ. ಪ್ಯಾರೀಸ್‌ನಲ್ಲಿ ಫ್ಯಾನ್ ಖರೀದಿಗೆ ಜನ ಮುಗಿಬಿದ್ದಿರುವ ದೃಶ್ಯದ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.


Spread the love
Share:

administrator

Leave a Reply

Your email address will not be published. Required fields are marked *