Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ವಾಡಲಜಾರಾ: ಆರಂಭಿಕ ಹಿನ್ನಡೆ ನಡುವೆಯೂ ದಕ್ಷಿಣ ಕೊರಿಯಾ ರೋಚಕ ಜಯ; ಝಕ್ ಗಣರಾಜ್ಯಕ್ಕೆ 2-1 ಗೋಲುಗಳ ಶಾಕ್!

Spread the love

ಗ್ವಾಡಲಜಾರಾದ ಎಸ್ಟಾಡಿಯೊ ಅಕ್ರಾನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ದಕ್ಷಿಣ ಕೊರಿಯಾ ತಂಡವು ಝಕ್ ಗಣರಾಜ್ಯ ತಂಡವನ್ನು 2-1 ಗೋಲುಗಳ ಅಂತರದಿಂದ ರೋಚವಾಗಿ ಮಣಿಸಿತು.
ಝಕಿಯಾ ತಂಡದ ಲಾಡಿಸ್ಲಾವ್ ಕ್ರೆಜಿ 59ನೇ ನಿಮಿಷದಲ್ಲಿ ಗೋಲು ಗಳಿಸಿ ಯುರೋಪ್ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ ಪ್ರಬಲ ಪ್ರತಿರೋಧ ಒಡ್ಡಿದ ದಕ್ಷಿಣ ಕೊರಿಯಾ ತಂಡವು ಹ್ವಾಂಗ್ ಇನ್ ಬಿವೊಮ್ 67ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಸ್ಕೋರನ್ನು 1-1ರಿಂದ ಸಮಬಲಗೊಳಿಸಿತು.
ಬದಲಿ ಆಟಗಾರ ಹಿಯೋನ್-ಗ್ಯು 80ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು.
ಕೊರಿಯಾದ ನಾಯಕ ಸನ್ ಹಿಯುಂಗ್ ಹಲವು ಅವಕಾಶಗಳನ್ನು ಕೈಚೆಲ್ಲಿದರು. ಇದರ ಲಾಭ ಪಡೆದ ಝಕಿಯಾ ಆಟಗಾರ ಲಾಡಿಸ್ಲಾವ್ ತನ್ನ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಎಂಟು ನಿಮಿಷದ ನಂತರ ಕೊರಿಯಾ ಆಟಗಾರ ಹ್ವಾಂಗ್ ಗೋಲು ಗಳಿಸಿ ಸ್ಕೋರನ್ನು ಸಮಬಲಕ್ಕೆ ತಂದರು.


Spread the love
Share:

administrator

Leave a Reply

Your email address will not be published. Required fields are marked *