ಟೊರೊಂಟೊ: ಕೆನಡಾದಲ್ಲಿ ಇಂದು ಫಿಫಾ ವಿಶ್ವಕಪ್ನ ಮತ್ತೊಂದು ವರ್ಣರಂಜಿತ ಆರಂಭ; ಬೋಸ್ನಿಯಾ ವಿರುದ್ಧ ಕೆನಡಾ ಫೈಟ್!

ಟೊರೊಂಟೊ: ಫಿಫಾ ವಿಶ್ವಕಪ್-2026ರ ಎರಡನೇ ಉದ್ಘಾಟನಾ ಸಮಾರಂಭವು ಕೆನಡಾದ ಟೊರೊಂಟೊ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ 11ಕ್ಕೆ ಆರಂಭವಾಗಲಿದೆ.
ಗುರುವಾರ ರಾತ್ರಿ ಮೆಕ್ಸಿಕೊದಲ್ಲಿ ಮೊದಲ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆದ ನಂತರ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 2-0 ಅಂತರದಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಎಲ್ಲರ ಗಮನ ಟೊರೊಂಟೊದತ್ತ ಹೊರಳಿದೆ. ಸಹ ಆತಿಥ್ಯ ದೇಶವಾದ ಕೆನಡಾ ತಂಡವು ಬೋಸ್ನಿಯಾ ಹಾಗೂ ಹೆರ್ಜೆಗೋವಿನಾ ತಂಡದ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಪಯಣ ಆರಂಭಿಸಲಿದೆ.
ಈ ಪಂದ್ಯಕ್ಕಿಂತ ಮೊದಲು ಸ್ಟಾರ್ಗಳನ್ನು ಒಳಗೊಂಡ ಅದ್ದೂರಿ ಉದ್ಘಾಟನಾ ಸಮಾರಂಭವು ಅಭಿಮಾನಿಗಳನ್ನು ರಂಜಿಸಲಿದೆ. ಬಾಲಿವುಡ್ ತಾರೆ ಹಾಗೂ ಅಂತರ್ರಾಷ್ಟ್ರೀಯ ಕಲಾವಿದೆ ನೋರಾ ಫತೇಹಿ ಮನೋರಂಜನಾ ಕಾರ್ಯಕ್ರಮದಲ್ಲಿ ಎಲ್ಲ ಗಮನ ಸೆಳೆಯಲಿದ್ದಾರೆ.
ಕೆನಡಾವು ಇದೇ ಮೊದಲ ಬಾರಿ ವಿಶ್ವಕಪ್ ಪಂದ್ಯದ ಆತಿಥ್ಯವಹಿಸಿದೆ. ಉದ್ಘಾಟನಾ ಸಮಾರಂಭವು ಸಂಗೀತ, ಸಂಸ್ಕೃತಿ ಹಗೂ ಮನರಂಜನೆಯ ಅದ್ಭುತ ಪ್ರದರ್ಶನ ಒದಗಿಸಲಿದೆ.
