Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫಿಫಾ ವಿಶ್ವಕಪ್: ಮೊರಾಕ್ಕೊ ಮಣಿಸಿದ ಫ್ರಾನ್ಸ್; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಎಂಬಾಪೆ ಪಡೆ!

Spread the love

ಬೋಸ್ಟನ್ : ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಮತ್ತು ಉಸ್ಮಾನೆ ಡೆಂಬೆಲೆ ಗಳಿಸಿದ ಗೋಲುಗಳ ನೆರವಿನಿಂದ ಫ್ರಾನ್ಸ್ ತಂಡವು ಮೊರಾಕ್ಕೊ ವಿರುದ್ಧ 2-0 ಅಂತರದ ಸುಲಭ ಜಯ ಗಳಿಸಿದೆ. ಆರಂಭದಲ್ಲಿ ಪೆನಾಲ್ಟಿ ಅವಕಾಶ ಕೈತಪ್ಪಿದರೂ, ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನ ರೂವಾರಿಯಾದರು.
ಮೊದಲಾರ್ಧದಲ್ಲಿ ಫ್ರಾನ್ಸ್ ತಂಡದ ಆಕ್ರಮಣಕಾರಿ ಆಟವನ್ನು ಮೊರಾಕ್ಕೊ ಗೋಲ್‌ಕೀಪರ್ ಯಶಸ್ವಿಯಾಗಿ ತಡೆದಿದ್ದರು.
ಮೊರಾಕ್ಕೊದ ಕೌಸರ್ ಮಜ್ರಯಿ ಅವರು ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಅವರನ್ನು ಫೌಲ್ ಮಾಡಿದಾಗ ಸಿಕ್ಕಿದ ಪೆನಾಲ್ಟಿಯನ್ನು ಕೂಡ ಅವರು ತಡೆಯುವ ಮೂಲಕ ಫ್ರಾನ್ಸ್‌ಗೆ ಒತ್ತಡ ಹೇರುತ್ತಲೇ ಇದ್ದರು.
ದ್ವಿತೀಯಾರ್ಧದಲ್ಲಿ ಎಂಬಾಪೆ ಒಂದು ಗೋಲು ಗಳಿಸಿದ್ದಲ್ಲದೆ, ಉಸ್ಮಾನೆ ಡೆಂಬೆಲೆ ಅವರಿಗೆ ಮತ್ತೊಂದು ಗೋಲು ಗಳಿಸಲು ಅತ್ಯುತ್ತಮ ನೆರವು ನೀಡುವ ಮೂಲಕ ಸುಲಭ ಜಯದ ರೂವಾರಿಯಾದರು.
ಗಾಯದ ಸಮಸ್ಯೆಯಿಂದಾಗಿ ಇಸ್ಮಾಯಿಲ್ ಸೈಬಾರಿ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಮೊರಾಕೊ ತಂಡವು ಆಕ್ರಮಣಕಾರಿ ಆಟ ಆಡುವಲ್ಲಿ ವಿಫಲವಾಯಿತು.
ಫ್ರಾನ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಅಥವಾ ಬೆಳ್ಳಿಯಂ ಪಂದ್ಯದ ವಿಜಯಿ ತಂಡವನ್ನು ಎದುರಿಸಲಿದೆ.


Spread the love
Share:

administrator

Leave a Reply

Your email address will not be published. Required fields are marked *