Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಟರ್ ಬಾಟಲ್‌ಗಳ ಗುಣಮಟ್ಟದ ಮೇಲೆ ಅನುಮಾನ: ರಾಜ್ಯಾದ್ಯಂತ ತಪಾಸಣೆಗೆ ಆದೇಶ!

Spread the love

ಬೆಂಗಳೂರು: ಹೋಟೆಲ್ ಆಯ್ತು, ಕ್ಲಬ್ ಆಯ್ತು, ಆಹಾರ ಪದಾರ್ಥ ಆಯ್ತು ಈಗ ವಾಟರ್ ಬಾಟಲ್ ಸರದಿ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತಪಾಸಣೆಗೆ ಆರೋಗ್ಯ ಸಚಿವ ಯು.ಟಿ ಖಾದರ್ (UT Khader) ಸೂಚನೆ ನೀಡಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ರಾಜ್ಯಾದ್ಯಂತ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (Packaged Drinking Water) ತಯಾರಿಕಾ ಘಟಕಗಳ ತಪಾಸಣೆಗೆ ಮುಂದಾಗಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ತಪಾಸಣೆ ನಡೆಯಲಿದ್ದು, 23 ತಂಡಗಳನ್ನ ರಚಿಸಿ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. ಸುಮಾರು 17 ಕಂಪನಿಗಳ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್‌ಗಳ ತಪಾಸಣೆಗೆ ಮುಂದಾಗಿದ್ದಾರೆ.ಪ್ಯಾಕ್ ಮಾಡಿದ ಕುಡಿಯುವ ನೀರಿನ ಬಾಟಲಿಗಳಲ್ಲಿ ಪ್ರಮುಖವಾಗಿ ಸಾಮಾನ್ಯ ಅಥವಾ ಕಲುಷಿತ ನೀರನ್ನು ತುಂಬುವುದು, ಅಗತ್ಯ ಖನಿಜಾಂಶಗಳನ್ನು ಸೇರಿಸದಿರುವುದು ಮತ್ತು ನಕಲಿ ಬ್ರ‍್ಯಾಂಡಿಂಗ್ ಹಾಗೂ ಕಳಪೆ ಸೀಲಿಂಗ್ ಬಳಸುವುದು. ನೀರಿನ ಶುದ್ಧೀಕರಣದ ವೇಳೆ ಬಳಸುವ ಕೀಟನಾಶಕಗಳ ಅವಶೇಷಗಳು ಅಥವಾ ಬ್ರೋಮೇಟ್‌ನಂತಹ ಹಾನಿಕಾರಕ ರಾಸಾಯನಿಕಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು. ಪ್ರಮುಖ ಕಲಬೆರಕೆ ವಿಧಾನಗಳಾಗಿವೆ. ಈ ಕಲಬೆರಕೆ ಆರೋಪಗಳು ಕೂಡ ಎದ್ದಿದೆ. ಈ ನಿಟ್ಟಿನಲ್ಲಿ ವಾಟರ್ ಬಾಟಲ್ ತಯಾರಿಕಾ ಘಟಕಗಳು ಮತ್ತು ವಾಟರತ ಬಾಟಲ್‌ಗಳ ತಪಾಸಣೆಗೆ ಮುಂದಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *