ಕಟ್ಟಡದ 13ನೇ ಮಹಡಿಯಿಂದ ಕುಸಿದ ಕ್ರೇನ್; ಓರ್ವ ಕಾರ್ಮಿಕ ದುರ್ಮರ*ಣ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಗುರುವಾರ ಕಟ್ಟಡದ 13 ನೇ ಮಹಡಿಯಿಂದ ನಿರ್ಮಾಣ ಕ್ರೇನ್ ಕುಸಿದು ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಮುಂಬೈ ಹೊರವಲಯದಲ್ಲಿರುವ ಮೀರಾ ರಸ್ತೆಯಲ್ಲಿರುವ ಜೆಪಿ ನಾರ್ತ್ ವಸತಿ ಸಂಕೀರ್ಣದಲ್ಲಿ ಈ ಅಪಘಾತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಬಹುಮಹಡಿಯ ಕೆಳಗೆ ನಿಲ್ಲಿಸಲಾಗಿದ್ದ ಹಲವಾರು ವಾಹನಗಳು ಡಿಕ್ಕಿಯಿಂದ ವ್ಯಾಪಕ ಹಾನಿಗೊಳಗಾಗಿವೆ. ಬಲಿಯಾದವರನ್ನು ಮುಜಮ್ಮಿಲ್ ಖೋಖರ್ ಎಂದು ಗುರುತಿಸಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದರು.
ಕ್ರೇನ್ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
