ಬೆಂಗಳೂರು: ಖಾಸಗಿ ಕಾಲೇಜು ಕ್ಯಾಬಿನ್ ನುಗ್ಗಿ ಅಸಿಸ್ಟೆಂಟ್ ಪ್ರೊಫೆಸರ್ ಮಗಳು ಲಕ್ಷ್ಮಿ ದುರ್ಗಾಳ ಮೇಲೆ ಚಾಕುವಿನಿಂದ ಹ*ಲ್ಲೆ ನಡೆಸಿದ ತಂದೆ!

ಬೆಂಗಳೂರು: ಖಾಸಗಿ ಕಾಲೇಜಿಗೆ ನುಗ್ಗಿದ ತಂದೆಯೊಬ್ಬರು ತಮ್ಮ ಮಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ರಾಜಾನುಕುಂಟೆಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ದುರ್ಗ ಚಾಕು ಇರಿತಕ್ಕೊಳಗಾದ ಯುವತಿ. ಆಕೆಯ ತಂದೆ ನಾಗೇಂದ್ರ ಚಾಕು ಇರಿದ ಆರೋಪಿಯಾಗಿದ್ದಾನೆ. ಜು.25ರ ಮಧ್ಯಾಹ್ನ 3:00 ಗಂಟೆ ವೇಳೆಗೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲೇ ಕೃತ್ಯ ನಡೆದಿದೆ.
ಆರೋಪಿ ಕಾಲೇಜಿಗೆ ಬಂದು ಮಗಳನ್ನು ನೋಡಬೇಕು ಎಂದಿದ್ದ. ಬಳಿಕ ಕ್ಯಾಬಿನ್‌ಗೆ ನುಗ್ಗಿ ಮಗಳ ಹೊಟ್ಟೆ, ಎದೆ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.