Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳ್ತಂಗಡಿ: ಕರಿಮಣೇಲು ಗ್ರಾಮದಲ್ಲಿ ಮನೆಯ ಬಾವಿಗೆ ಬಿದ್ದ ಬೃಹತ್ ಚಿರತೆ – ಅರಣ್ಯ ಇಲಾಖೆಯಿಂದ ಯಶಸ್ವಿ ರಕ್ಷಣೆ!

Spread the love

ಬೆಳ್ತಂಗಡಿ : ಕರಿಮಣೇಲು ಗ್ರಾಮದ ಬಕ್ಯರಡ್ಡ ನಿವಾಸಿ ಅಶೋಕ ಪೂಜಾರಿ ಎಂಬುವರ ಮನೆಯ ತೆರೆದ ಬಾವಿಗೆ ಬಿದ್ದಿದ್ದ ಬೃಹತ್ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆಹಾರ ಅರಸಿ ರಾತ್ರಿ ವೇಳೆ ಬಂದಿದ್ದ ಚಿರತೆ, ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಾವಿಯಲ್ಲಿ 6 ಅಡಿಯಷ್ಟು ನೀರಿದ್ದು, ಸೋಮವಾರ ಬೆಳಿಗ್ಗೆ ಮನೆಯವರು ಬಾವಿಯತ್ತ ತೆರಳಿದಾಗ ಚಿರತೆ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಧಾವಿಸಿದರು. ಕುಂದಾಪುರ ವಿಭಾಗದ ಡಿಎಫ್‌ಒ ರುತ್ರನ್ ಹಾಗೂ ಮೂಡುಬಿದಿರೆ ಎಸಿಎಫ್ ಆಕಾಶ್ ಕದಂ ಅವರ ಮಾರ್ಗದರ್ಶನದಲ್ಲಿ, ವೇಣೂರು ಆರ್‌ಎಫ್‌ಒ ಭರತ್, ಡಿಆರ್‌ಎಫ್‌ಒ ಅಶ್ವಿತ್, ಅರಣ್ಯ ರಕ್ಷಕ ದಿವಾಕರ, ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು. ಬೆಳಿಗ್ಗೆ ಆರಂಭವಾದ ಸಾಹಸಮಯ ಕಾರ್ಯಾಚರಣೆಯು ಸಂಜೆ 4:30ರ ಹೊತ್ತಿಗೆ ಮುಕ್ತಾಯಗೊಂಡಿತು. ವನ್ಯಜೀವಿ ರಕ್ಷಣಾ ಬಲೆ ಹಾಗೂ ಚಿರತೆ ಹಿಡಿಯುವ ಬೋನನ್ನು ಬಾವಿಯೊಳಗೆ ಇಳಿಸಿ, ಚಿರತೆಗೆ ಯಾವುದೇ ಗಾಯವಾಗದಂತೆ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.ಚಿರತೆಯನ್ನು ಬಾವಿಯಿಂದ ಹೊರತೆಗೆದ ಬಳಿಕ ಪಶುವೈದ್ಯೆ ಡಾ. ಯಶಸ್ವಿನಿ ಅವರು ವೈದ್ಯಕೀಯ ತಪಾಸಣೆ ನಡೆಸಿದರು. ರಕ್ಷಿಸಲಾದ ಚಿರತೆಯು ಸುಮಾರು 3 ವರ್ಷ ವಯಸ್ಸಿನ ಹೆಣ್ಣು ಚಿರತೆಯಾಗಿದ್ದು, ನೀರಲ್ಲಿದ್ದು ಸ್ವಲ್ಪ ಆಯಾಸಗೊಂಡಿರುವುದನ್ನು ಬಿಟ್ಟರೆ ಶರೀರಕ್ಕೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅದು ಸಂಪೂರ್ಣ ಆರೋಗ್ಯವಾಗಿದ್ದು, ಕಾಡಿನಲ್ಲಿ ಸ್ವತಂತ್ರವಾಗಿ ಬದುಕಲು ಸಮರ್ಥವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಬಳಿಕ ಹಿರಿಯ ಅರಣ್ಯಾಧಿಕಾರಿಗಳ ಸೂಚನೆಯಂತೆ ರಕ್ಷಿಸಲ್ಪಟ್ಟ ಚಿರತೆಯನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಯಶಸ್ವಿಯಾಗಿ ಬಿಡುಗಡೆ ಮಾಡಲಾಯಿತು.


Spread the love
Share:

administrator

Leave a Reply

Your email address will not be published. Required fields are marked *