Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಸ್ಕಾಂ ಗ್ರಾಹಕರ ಗಮನಕ್ಕೆ: ಜುಲೈ ತಿಂಗಳಲ್ಲಿ ಸರಾಸರಿ ವಿದ್ಯುತ್ ಬಿಲ್; ಮೀಟರ್ ರೀಡಿಂಗ್ ಇರುವುದಿಲ್ಲ!

Spread the love

ಬೆಂಗಳೂರು: ಗೃಹಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್ ಗಳು ನಿಯೋಜನೆಗೊಂಡಿರುವುದರಿಂದ ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ, ಗ್ರಾಹಕರಿಗೆ ಸರಾಸರಿ (Average Bills) ಬಿಲ್ ಗಳನ್ನು ನೀಡಲಾಗುತ್ತದೆ. ಜುಲೈ ತಿಂಗಳ ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟನೆ ತಿಳಿಸಿದೆ.
ಆದರೆ ಎಚ್ ಟಿ ಗ್ರಾಹಕರು, 40 HP ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಸನ್ (LT) ಗ್ರಾಹಕರು, ಸೋಲಾರ್ ರೂಫ್ಲಾಪ್ (SRTPV) ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಜುಲೈ ತಿಂಗಳ ಸರಾಸರಿ ಬಿಲ್ ಗಳನ್ನು ಗ್ರಾಹಕರಿಗೆ ಎಸ್ಸೆಮ್ಮೆಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಗೃಹ ಬಳಕೆದಾರರಿಗೆ ಆಗಸ್ಟ್ ತಿಂಗಳಿನಿಂದ ಯಥಾ ಪ್ರಕಾರ ನಿಯಮಿತ ಮೀಟರ್ ರೀಡಿಂಗ್ ಮತ್ತು ನೈಜ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗುವುದು.
ಸರಾಸರಿ ಬಿಲ್ಡಿಂಗ್ ಅವಧಿಯಲ್ಲಿನ ವ್ಯತ್ಯಾಸದ ಯುನಿಟ್ ಗಳನ್ನು ನೈಜ ಮೀಟರ್ ರೀಡಿಂಗ್ ಆರಂಭವಾದ ನಂತರ ಮುಂದಿನ ಬಿಲ್ ಗಳಲ್ಲಿ ಸೂಕ್ತವಾಗಿ ಹೊಂದಾಣಿಕೆ (Adjust) ಮಾಡಲಾಗುವುದು.
ಗ್ರಾಹಕರು ಜುಲೈ ಬಿಲ್ ನ ಪಾವತಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ಎಲ್ಲ ಪಾವತಿ ವಿಧಾನಗಳನ್ನು(ಉಪ ವಿಭಾಗದ ನಗದು ಕೌಂಟರ್ ಗಳು, ಬೆಸ್ಕಾಂ ವೆಬ್ ಸೈಟ್, ಬೆಸ್ಕಾಂ ಮಿತ್ರ ಆಪ್ ಹಾಗೂ ಥರ್ಡ್ ಪಾರ್ಟಿ ಆಪ್ ಬಳಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *