Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಸ್ಲೆರಿ ಕಂಪನಿಗೆ ಮತ್ತೊಂದು ಶಾಕ್; ಪಶ್ಚಿಮ ಬಂಗಾಳದಲ್ಲೂ ನೀರಿನ ಮಾದರಿ ಅಸುರಕ್ಷಿತ ಎಂದು ಘೋಷಣೆ!

Spread the love

ಕೋಲ್ಕತ್ತಾ: ಕರ್ನಾಟಕ ಆಯ್ತು ಈಗ ಪಶ್ಚಿಮ ಬಂಗಾಳದಲ್ಲಿ ಬಿಸ್ಲೆರಿ (Bisleri) ಕಂಪನಿಗೆ ಸಂಕಷ್ಟ ಎದುರಾಗಿದೆ. ಬಂಗಾಳದಲ್ಲೂ ಬಿಸ್ಲೆರಿ ನೀರಿನ ಮಾದರಿ ಅಸುರಕ್ಷಿತ ಎಂದು ಘೋಷಿಸಲಾಗಿದೆ.ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದನ್ನು ಪ್ರಯೋಗಾಲಯಗಳು ದೃಢಪಡಿಸಿವೆ. ಈ ರೀತಿಯ ಬ್ಯಾಕ್ಟೀರಿಯಾಗಳು ಒಳಚರಂಡಿ ಸೋರಿಕೆ ಅಥವಾ ಹಾನಿಗೊಳಗಾದ ಪೈಪ್‌ಗಳು ಸೇರಿದಂತೆ ಇತರ ಮಾರ್ಗಗಳ ಮೂಲಕ ನೀರನ್ನು ಪ್ರವೇಶಿಸಬಹುದು. ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಎಫ್‌ಎಸ್‌ಎಸ್‌ಎಐ ಅನುಮತಿ ನೀಡಿದೆಜಲಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದ ಘಟಕದಿಂದ ಸಂಗ್ರಹಿಸಿದ್ದ ನೀರಿನ ಮಾದರಿ ಪರೀಕ್ಷೆಯಲ್ಲಿ ವಿಫಲವಾಗಿದೆ. 2026ರ ಆಗಸ್ಟ್ 12ರಂದು ಸಂಬಂಧಿತ ಒಂದು ಬ್ಯಾಚ್‌ನ ಮಾರಾಟಕ್ಕೆ ಪ್ರಾಧಿಕಾರ ನಿರ್ಬಂಧ ವಿಧಿಸಿತ್ತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ವಿಚಾರಣೆ ಹಾಗೂ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು.ಗೋವಾ ಘಟಕದ ನೀರಿನ ಮಾದರಿಯೂ ಈ ಹಿಂದೆ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಬಿಸ್ಲೆರಿ ಉತ್ಪನ್ನಗಳು ಬಳಕೆಗೆ ಸುರಕ್ಷಿತ ಎಂದು ಈ ಹಿಂದೆ ಕಂಪನಿ ಸ್ಪಷ್ಟನೆ ನೀಡಿತ್ತು.


Spread the love
Share:

administrator

Leave a Reply

Your email address will not be published. Required fields are marked *