Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫಾರಂ-7 ದುರ್ಬಳಕೆ ಆರೋಪ: ಇಸಿಒ ಕಚೇರಿ ಮುಂದೆ ಸಿಎಂ ಡಿಕೆಶಿ ಧರಣಿ

Spread the love

ಬೆಂಗಳೂರು: ಫಾರಂ-7 ದುರ್ಬಳಕೆ ಆರೋಪ ಸಂಬಂಧ ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಡಿಕೆ ಶಿವಕುಮಾರ್​​ ಮತ್ತು ಸಚಿವರ ಧರಣಿ ನಡೆಸಿದ ಬೆನ್ನಲ್ಲೇ, ಕಾನೂನು ಪ್ರಕಾರ ಕ್ರಮ‌ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸೂಚನೆ ನೀಡಿದ್ದಾರೆ. ಸ್ಥಳ ಕದಲದೆ ಕಾಂಗ್ರೆಸಿಗರ ಪ್ರತಿಭಟನೆ ಹಿನ್ನೆಲೆ ಸಿಇಸಿ ಜ್ಞಾನೇಶ್ ಕುಮಾರ್ ಸೇರಿ ಮೂವರು ಆಯುಕ್ತರ ಜೊತೆಗೆ ಅನ್ಬುಕುಮಾರ್ ವಿಡಿಯೋ ಕಾನ್ಫ​ರೆನ್ಸ್ ಮೂಲಕ ಸಭೆ ನಡೆಸಿದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರು ಕಚೇರಿ ಬಳಿ ಧರಣಿ ಕೂತಿದ್ದಾರೆ. ತನಿಖೆಗೆ ಆದೇಶ ನೀಡುವಂತೆ ಸಿಎಂ, ಸಚಿವರು ಪಟ್ಟು ಹಿಡಿದಿದ್ದಾರೆ ಎಂದುದನ್ನು ವಿವರಿಸಿದ್ದರು ಎನ್ನಲಾಗಿದೆ.
‘ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ’
ಇನ್ನು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಜತೆ ಚರ್ಚಿಸಿದ ಬಳಿಕ ಸಿಎಂ ಡಿಕೆ ಶಿವಕುಮಾರ್​​ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅನೇಕ ವಿಚಾರಗಳನ್ನು ರಾಜ್ಯದ ಜನತೆಯ ಗಮನಕ್ಕೆ ತಂದಿದ್ದೇವೆ. 1 ಕೋಟಿಗೂ ಹೆಚ್ಚು ಮತಗಳನ್ನು ಅನೇಕ ಸಂದರ್ಭದಲ್ಲಿ ತೆಗೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್​​ನವರು ದೊಡ್ಡ ಕುತಂತ್ರ ನಡೆಸಿದ್ದಾರೆ. ಮತದಾನದ ಹಕ್ಕು ಇದ್ದವರನ್ನೇ ತೆಗೆಯಲು ವಿಪಕ್ಷಗಳಿಂದ ಕುತಂತ್ರ ನಡೆದಿದೆ. ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ. 50 ಲಕ್ಷಕ್ಕೂ ಹೆಚ್ಚು ಜನರಿಗೆ ಸಮಸ್ಯೆ ಅಂತ ನೋಟಿಸ್ ಕೊಟ್ಟಿದ್ದಾರೆ. ಸುಮಾರು ಜನ ಬೇರೆ ಜಾಗಕ್ಕೆ ಶಿಫ್ಟ್ ಆಗಿದ್ದಾರೆ, ಮರಣ ಹೊಂದಿದ್ದಾರೆ. ಆದರೆ ಇದೆಲ್ಲಾ ಆದ್ಮೇಲೆ ಯಾರಿಗೆ ಮತದಾನದ ಹಕ್ಕು ಇದೆಯೋ ಅವರನ್ನು ತೆಗೆಯಲು ಬಿಜೆಪಿ, ಜೆಡಿಎಸ್​ನವರು ಫಾರ್ಮ್​-7 ಕೊಟ್ಟರು. ಕೊನೆ 3 ದಿನ ಎಲ್ಲೋ ಒಂದ್ಕಡೆ ಫಾರ್ಮ್​ ಪ್ರಿಂಟ್ ತೆಗೆದು ಕೊಟ್ಟಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.‘ನೀವೆಲ್ಲ ಚುನಾವಣಾ ಅಕ್ರಮದ ವಂಶದಿಂದ ಬಂದವರು’
ಮತ್ತೊಂದೆಡೆ ಆಡಳಿತ ಪಕ್ಷದ ನಡೆಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ತೀವ್ರ ವಾಗ್ದಾಳಿ ನಡೆಸಿದ್ದು, ಇಂದಿರಾ ಗಾಂಧಿಯವರನ್ನು ಚುನಾವಣಾ ಅಕ್ರಮ ಮಾಡಿದ್ದೀರೆಂದು ಪ್ರಧಾನಿ ಹುದ್ದೆಯಿಂದ ಕತ್ತು ಹಿಡಿದು ತಳ್ಳಿದ್ದರು. ನೀವೆಲ್ಲಾ ಚುನಾವಣಾ ಅಕ್ರಮದ ವಂಶದಿಂದ ಬಂದವರು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಲ್ಲ, ಅವರು ರಾಜ್ಯದ ಸಿಎಂ. ಗೌರವಾನ್ವಿತ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ. ಆದರೆ ಕೋರ್ಟ್ ಆದೇಶ ಗಾಳಿಗೆ ತೂರಿ, ಕ್ಯಾಬಿನೆಟ್ ಮುಂದೂಡಿ ಸಿಎಂ ಪ್ರತಿಭಟನೆ ನಡೆಸಿದ್ದಾರೆ. ದೆಹಲಿ ದೊರೆಗಳ ಸೂಚನೆಯಂತೆ ನಾಟಕ ಮಾಡುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.
ತಪ್ಪಾಗಿದ್ದರೆ ಕೋರ್ಟ್ ಆಯೋಗಕ್ಕೆ ಛೀಮಾರಿ ಹಾಕುತ್ತದೆ, ನೀವು ಯಾರು? ಮತದಾನದ ಹಕ್ಕು ರಕ್ಷಿಸಬೇಕು. ಹಾಗೆಯೇ ಬಾಂಗ್ಲಾದೇಶ, ಪಾಕಿಸ್ತಾನದವರು ಕೂಡಾ ಇರಬಾರದು. ಅದು ಭಾರತಕ್ಕೆ ಗಂಡಾಂತರ, ಅರ್ಹರು ಡಿಲೀಟ್ ಆಗಬಾರದೆಂಬುದು ನಮ್ಮ ಪಕ್ಷದ ನಿಲುವು. ನಾಲ್ಕೈದು ಕಡೆ ಮತ ಹಾಕುವವರ ಪರ ನೀವು ನಿಲ್ಲುವುದು ಸರಿಯೇ? ಎಂದವರು ಪ್ರಶ್ನಿಸಿದ್ದಾರೆ. ನನ್ನ ಮಾಹಿತಿ ಪ್ರಕಾರ ಯಾವುದೇ ಮತ ಡಿಲೀಟ್ ಆಗಿಲ್ಲ. ಬೆಳಗಾವಿಯಲ್ಲಿ ಸಾಮೂಹಿಕ ಅಂತಾ ರಿಜೆಕ್ಟ್ ಮಾಡಿದ್ದಾರೆ. ಗ್ಯಾರಂಟಿ ಹೆಸರಲ್ಲಿ ನಿಮ್ಮ ತಾತ ಯಾರು, ಮಾವ ಯಾರು ಅಂತೆಲ್ಲ ನೀವು ಕೇಳಬಹುದು. ಆದರೆ ಚುನಾವಣಾ ಆಯೋಗ ಕೇಳಬಾರದಾ? ಎಂದವರು ಪ್ರಶ್ನಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *