Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾಸನದಲ್ಲಿ ಹಾಡಹಗಲೇ ಪ್ರತ್ಯಕ್ಷವಾದ ಜೋಡಿ ಚಿರತೆಗಳು; ಗ್ರಾಮಸ್ಥರಲ್ಲಿ ಆತಂಕ!

Spread the love

ಹಾಸನ: ಜನರು ಓಡಾಡುವ ರಸ್ತೆಯಲ್ಲಿ (Hassan) ಹಾಡಹಗಲೇ ಜೋಡಿ ಚಿರತೆಗಳು (Leopard)ಪ್ರತ್ಯಕ್ಷವಾಗಿರುವ ಘಟನೆ ಹಾಸನ ತಾಲೂಕಿನ ನಿಡುಡಿ ಗ್ರಾಮದ ಬಳಿ ನಡೆದಿದೆ.ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬಯಲುಸೀಮೆ ಭಾಗದಲ್ಲಿ ಚಿರತೆಗಳ ಕಾಟ ಶುರುವಾಗಿದೆ. ಹಾಡಹಗಲೇ 2 ಚಿರತೆಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ.ಈ ಹಿಂದೆ ಕೂಡ ಹಲವು ಬಾರಿ ಕಾಣಿಸಿಕೊಂಡಿದ್ದ ಚಿರತೆಗಳು ಬೀದಿನಾಯಿ, ಜಾನುವಾರುಗಳನ್ನು ತಿಂದು ಆತಂಕ ಸೃಷ್ಟಿಸಿದ್ದವು. ಆದರೆ, ಈಗ ಮತ್ತೆ ಈ ವನ್ಯ ಮೃಗಗಳ ಕಾಟ ಶುರುವಾಗಿದ್ದು, ರಾತ್ರಿ ವೇಳೆ ಗ್ರಾಮದೊಳಗೆ ಪ್ರವೇಶಿಸಿ ಜನರಿಗೆ ಪ್ರಾಣಭಯ ಹುಟ್ಟಿಸಿವೆಹಗಲಿನಲ್ಲೇ ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳು, ಭಯದ ವಾತಾವರಣ ನಿರ್ಮಾಣ ಮಾಡಿವೆ. ಚಿರತೆ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *