Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೈದರಾಬಾದ್‌ನಲ್ಲಿ ಭಾರೀ ಅಗ್ನಿ ಅವಘಡ: 22 ಅಂತಸ್ತಿನ ಅಪಾರ್ಟ್‌ಮೆಂಟ್‌ನ 18ನೇ ಮಹಡಿವರೆಗೂ ಬೆಂಕಿ!

Spread the love

ಹೈದರಾಬಾದ್: ನಗರದ ನಾನಕ್ರಾಮ್‌ಗುಡ (ನರ್ಸಿಂಗಿ) ಪ್ರದೇಶದಲ್ಲಿರುವ ಪ್ರತಿಷ್ಠಿತ ‘ಪೆಸಿಫಿಕಾ ಹಿಲ್ ಕ್ರೆಸ್ಟ್’ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ (Fire Accident) ಗುರುವಾರ ಮಧ್ಯಾಹ್ನ ಭಾರಿ ಅಗ್ನಿ ಅವಘಡ ಸಂಭವಿಸಿದೆ. 22 ಅಂತಸ್ತಿನ ಈ ವಸತಿ ಕಟ್ಟಡದ 18ನೇ ಮಹಡಿಯವರೆಗೂ (Hyderabad) ಬೆಂಕಿ ವ್ಯಾಪಿಸಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು.ಮಧ್ಯಾಹ್ನದ ವೇಳೆ ಅಪಾರ್ಟ್‌ಮೆಂಟ್‌ನ ಒಂದು ಬ್ಲಾಕ್‌ನ ಐದನೇ ಮಹಡಿಯ ಸುತ್ತಮುತ್ತ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಎಲ್ಲೆಡೆ ಹರಡಿ 12ನೇ ಮಹಡಿಯಿಂದ 18ನೇ ಮಹಡಿಯವರೆಗೆ ಆವರಿಸಿಕೊಂಡಿದೆ. 22 ಅಂತಸ್ತಿನ ಕಟ್ಟಡದ ಬಹುತೇಕ ಭಾಗಕ್ಕೆ ಬೆಂಕಿ ಹಬ್ಬಿದೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ ಸಿಲುಕಿದ್ದ ನಿವಾಸಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಕಾರ್ಯ ನಡೆಯುತ್ತಿದೆಸದ್ಯ ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಎಷ್ಟು ಆಸ್ತಿ ಹಾನಿಯಾಗಿದೆ ಹಾಗೂ ಸಾವುನೋವು ಸಂಭವಿಸಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ


Spread the love
Share:

administrator

Leave a Reply

Your email address will not be published. Required fields are marked *