Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವ ವೈದ್ಯನಿಗೆ ಹನಿಟ್ರ್ಯಾಪ್ ಮಾದರಿಯಲ್ಲಿ ಬಲೆ? ₹3 ಲಕ್ಷದ ಮೊಬೈಲ್ ದರೋಡೆ ಆರೋಪ: ನಟಿ ಅಥುಲ್ಯಾ ಚಂದ್ರನ್, ನಟ ಬಿಬಿನ್ ಬಂಧನ!

Spread the love

ಕೊಚ್ಚಿ : ಕೇರಳದ ಕೊಚ್ಚಿಯ ಪೊನ್ನುರುನ್ನಿಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಯುವ ವೈದ್ಯನೊಬ್ಬನನ್ನು ಕರೆಸಿಕೊಂಡು ಥಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಫೋನ್‌ಗಳನ್ನು ಕಸಿದುಕೊಂಡ ಪ್ರಕರಣದಲ್ಲಿ ಮಲಯಾಳಂ ಚಲನಚಿತ್ರ ನಟಿ ಅಥುಲ್ಯಾ ಚಂದ್ರನ್ (Athulya Chandran) ಹಾಗೂ ನಟ ಬಿಬಿನ್ ಪೆರುಂಪಲ್ಲಿ (Bibin Perumpally) ಸೇರಿದಂತೆ ಮೂವರನ್ನು ಕಡವಂತ್ರ ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಡವಂತ್ರ ಪೊಲೀಸರು ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ನಟಿ ಅಥುಲ್ಯಾ ಚಂದ್ರನ್ ಅವರು ತಮ್ಮ ತಾಯಿಯ ತಂಗಿ (ಚಿಕ್ಕಮ್ಮ) ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿ, ತಮಗೆ ಮುಂಚಿನಿಂದಲೂ ಪರಿಚಿತರಾಗಿದ್ದ ಯುವ ವೈದ್ಯರನ್ನು ಪೊನ್ನುರುನ್ನಿಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದರು. ವೈದ್ಯರು ಪರಿಶೀಲನೆಗೆ ಫ್ಲ್ಯಾಟ್‌ಗೆ ತಲುಪುತ್ತಿದ್ದಂತೆಯೇ, ಅಲ್ಲಿದ್ದ ಆರೋಪಿಗಳ ತಂಡ ವೈದ್ಯರಿಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿದೆ. ಅಷ್ಟಕ್ಕೇ ನಿಲ್ಲದೆ ವೈದ್ಯರ ಬಳಿಯಿದ್ದ ಬರೋಬ್ಬರಿ ₹3 ಲಕ್ಷ ಮೌಲ್ಯದ ಎರಡು ದುಬಾರಿ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ (FIR) ಉಲ್ಲೇಖಿಸಲಾಗಿದೆ.ಘಟನೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ಒಟ್ಟು 12 ಜನರನ್ನು ಪೊಲೀಸರು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಆರೋಪಿ-1 (A1): ಬಿಬಿನ್ ಪೆರುಂಪಲ್ಲಿ (ಚಲನಚಿತ್ರ ನಟ)
ಆರೋಪಿ-3 (A3): ಅಥುಲ್ಯಾ ಚಂದ್ರನ್ (ಚಲನಚಿತ್ರ ನಟಿ)
ದಾಳಿ ನಡೆಸಿದ ಉಳಿದ 9-10 ಆರೋಪಿಗಳನ್ನು ನೇರವಾಗಿ ನೋಡಿದರೆ ಗುರುತಿಸುವುದಾಗಿ ಯುವ ವೈದ್ಯರು ಪೊಲೀಸರಿಗೆ ನೀಡಿರುವ ಅಧಿಕೃತ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.ಬಂಧಿತ ನಟಿ ಅಥುಲ್ಯಾ ಚಂದ್ರನ್, ಬಿಬಿನ್ ಪೆರುಂಪಲ್ಲಿ ಸೇರಿದಂತೆ ಮೂವರನ್ನು ಕಡವಂತ್ರ ಪೊಲೀಸರು ಆರಂಭಿಕ ತನಿಖೆಯ ನಂತರ ವೈದ್ಯಕೀಯ ತಪಾಸಣೆಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಕಡವಂತ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *