ಬೈಕ್ಗೆ ಲಾರಿ ಡಿಕ್ಕಿ: 9 ಮತ್ತು 6 ವರ್ಷದ ಮಕ್ಕಳೊಂದಿಗೆ ತಂದೆಯೂ ಸಾ*ವು!

ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಮಕ್ಕಳಿಬ್ಬರೊಂದಿಗೆ ಊರಿಗೆ ತೆರಳುವಾಗ ಲಾರಿ (Lorry) ಡಿಕ್ಕಿಯಾಗಿ ತಂದೆ ಹಾಗೂ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ.

ಗಂಗಾವತಿ (Gangavathi) ನಿವಾಸಿಯಾದ ಅಮರ್ ಚೌಸ್ (32), ಇವರ ಪುತ್ರ ಅಮನ್ (9) ಹಾಗೂ ಮಗಳು ಅಮಯ್ ಯಾರಾ (6) ಮೃತ ದುರ್ದೈವಿಗಳು. ಕುಟುಂಬ ಕಲಹ ಕಾರಣ ಅಮರ್ ಚೌಸ್ ಪತ್ನಿ ತವರು ಮನೆಯಾದ ಕೊಪ್ಪಳಕ್ಕೆ ಬಂದಿದ್ದರು. ಪತ್ನಿಯನ್ನು ಕರೆದೊಯ್ಯಲು ಗಂಗಾವತಿಯಿಂದ ಕೊಪ್ಪಳಕ್ಕೆ ಬಂದಿದ್ದ ಅಮರ್ ಚೌಸ್ ಪುನಃ ಪತ್ನಿಯೊಂದಿಗೆ ಜಗಳ ವಾಡಿಕೊಂಡಿದ್ದರು.ಕೋಪದಲ್ಲೇ ತಡರಾತ್ರಿ ವಾಪಸ್ ಗಂಗಾವತಿಗೆ ಬೈಕ್ನಲ್ಲಿ ತೆರಳಿದ್ದಾರೆ. ಜೊತೆಗೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಗಿಣಿಗೇರಿ ಬಳಿ ಲಾರಿಯೊಂದು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ನುಜ್ಜುಗುಜ್ಜಾಗಿದೆ. ಘಟನೆ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ