ಪಾಕಿಸ್ತಾನದಲ್ಲೂ ‘ರಾಮಾಯಣ’ ಚಿತ್ರದ ಕ್ರೇಜ್: ‘ಜೈ ಶ್ರೀ ರಾಮ್’ ಘೋಷಣೆ ಕೂಗಿ ಬಿಡುಗಡೆಗೆ ಆಗ್ರಹ!

ನಿತೇಶ್ ತಿವಾರಿ ಅವರ ‘ರಾಮಾಯಣ’ (Ramayana) ಪಾಕಿಸ್ತಾನದಲ್ಲೂ (Pakistan) ಸದ್ದು ಮಾಡುತ್ತಿದೆ. ಕರಾಚಿಯಿಂದ (Karachi) ಬಂದಿರುವ ಒಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ದೇಶದಲ್ಲಿ ಸಿನಿಮಾ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಕರಾಚಿ ನಗರದ ಹಿಂದೂ ಸಮುದಾಯದ ಜನರು ಬೀದಿಗಳಲ್ಲಿ ಈ ಚಿತ್ರದ ಪರವಾಗಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಭಕ್ತಿಗೀತೆಗಳನ್ನು ಹಾಡಿದರು. ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗಿದರು.ಈ ಚಲನಚಿತ್ರವು ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ದೀಪಾವಳಿ ಸಂಭ್ರಮದ ಜೊತೆ ಸಿನಿಮಾ ತೆರೆಗೆ ಬರಲಿದೆ. ಪಾಕ್ನ ಕರಾಚಿಯಲ್ಲಿ ಅಭಿಮಾನಿಗಳು ಪೋಸ್ಟರ್ಗಳನ್ನು ಹಿಡಿದುಕೊಂಡು ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಇರುವ ಪೋಸ್ಟರ್ಗಳನ್ನು ಹಿಡಿದು ಜನರು ಮೆರವಣಿಗೆ ಮಾಡಿದ್ದಾರೆ.ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣಲಿ ಎಂದು ಆಶಿಸಿದ್ದಾರೆ. ಅಲ್ಲದೇ, ಇದು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಲಿ ಎಂದೂ ಆಶಯ ವ್ಯಕ್ತಪಡಿಸಿದ್ದಾರೆ.
