Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಚೋರಿ ತಿನ್ನುತ್ತಿದ್ದ ಉದ್ಯಮಿಗೆ ಬಿಗ್ ಶಾಕ್: ₹20 ಲಕ್ಷ ನಗದು ಎಗರಿಸಿದ ಕಳ್ಳರು!

Spread the love

ಜೈಪುರ : ಸಂಜೆ ವೇಳೆಗೆ ಹಸಿವು ನೀಗಿಸಿಕೊಳ್ಳಲು ₹20 ನೀಡಿ ಕಚೋರಿ ಖರೀದಿಸಿದ ಉದ್ಯಮಿಯೊಬ್ಬರಿಗೆ, ಆ ಕಚೋರಿಯ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿಯಷ್ಟು ದುಬಾರಿಯಾದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಸಂಭವಿಸಿದೆ. ಉದ್ಯಮಿಯೊಬ್ಬರು ರಸ್ತೆಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಕಚೋರಿ ಸವಿಯುತ್ತಿದ್ದಂತೆಯೇ, ಬಂದ ಕಳ್ಳರು ಅವರ ಸ್ಕೂಟರ್‌ನಲ್ಲಿದ್ದ ₹20 ಲಕ್ಷ ನಗದಿದ್ದ ಚೀಲವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಇಡೀ ಕಳವು ಕೃತ್ಯವು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಜೈಪುರದ ನಹರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ಉದ್ಯಮಿ ಚಂಪಾಲಾಲ್ ಅವರು ತಮ್ಮ ಸ್ಕೂಟರ್‌ನಲ್ಲಿ ₹20 ಲಕ್ಷ ನಗದು ತುಂಬಿದ್ದ ಚೀಲವನ್ನು ಮುಂಭಾಗದ ಜಾಗದಲ್ಲಿ ಇಟ್ಟುಕೊಂಡು ಕಚೋರಿ ತಿನ್ನಲು ರಸ್ತೆಬದಿ ನಿಂತಿದ್ದರು. ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ, ಚಂಪಾಲಾಲ್ ಅವರು ಸ್ಕೂಟರ್ ಮೇಲೆ ಕುಳಿತು ಕಚೋರಿ ಸವಿಯುತ್ತಿರುತ್ತಾರೆ. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧಾರಿ ಕಳ್ಳರು ತಕ್ಷಣವೇ ಚಂಪಾಲಾಲ್ ಅವರ ಸ್ಕೂಟರ್ ಪಕ್ಕದಲ್ಲೇ ಗಾಡಿ ನಿಲ್ಲಿಸಿ, ಕಣ್ಣು ಮುಚ್ಚುವುದರೊಳಗೆ ನಗದು ಚೀಲವನ್ನು ಕಸಿದುಕೊಂಡು ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾರೆ.

ತಮ್ಮ ಕಣ್ಣೆದುರೇ ಲಕ್ಷಾಂತರ ರೂಪಾಯಿ ಹಣ ಕಳವಾಗಿದ್ದನ್ನು ಕಂಡು ಕಂಗಾಲಾದ ಚಂಪಾಲಾಲ್, ಕೈಯಲ್ಲಿ ಕಚೋರಿಯನ್ನು ಬಿಗಿಯಾಗಿ ಹಿಡಿದುಕೊಂಡೇ ಕಳ್ಳರ ಬೆನ್ನಟ್ಟಿ ಓಡಿದ್ದಾರೆ. ಸ್ಥಳೀಯರು ಸಹ ಉದ್ಯಮಿಯ ನೆರವಿಗೆ ಧಾವಿಸಿ ಕಳ್ಳರನ್ನು ಹಿಡಿಯಲು ಯತ್ನಿಸಿದರೂ, ಚಾಣಾಕ್ಷ ಕಳ್ಳರು ಗಾಡಿ ವೇಗಗೊಳಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಹರ್‌ಗಢ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಚಂಪಾಲಾಲ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಹೆಲ್ಮೆಟ್ ಧರಿಸಿ ಬಂದು ಕಳವು ನಡೆಸಿದ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *