ತಮಿಳುನಾಡಿನ ಥೇಣಿ ಜೈಲಿನಿಂದ 17 ಖೈದಿಗಳು ಎಸ್ಕೇಪ್: ಓರ್ವನ ಬಂಧನ!

ಚೆನ್ನೈ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಖೈದಿಗಳು (Convicts) ಪರಾರಿಯಾಗಿರುವ ಘಟನೆ ತಮಿಳುನಾಡಿನ (Tamil Nadu) ಥೇಣಿ ಉಪಜೈಲಿನಲ್ಲಿ (Theni Sub-Jail) ಸೋಮವಾರ ತಡರಾತ್ರಿ ನಡೆದಿದೆ.

ಘಟನೆ ಬಳಿಕ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಪರಾರಿಯಾದ ಖೈದಿಗಳ ಪೈಕಿ ಓರ್ವನನ್ನು ಬಂಧಿಸಿದ್ದಾರೆ. ಉಳಿದ ಖೈದಿಗಳ ಪತ್ತೆಗಾಗಿ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯೇಂದ್ರ ಬಿಡಾರಿ ಈ ಕುರಿತು ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆ ವೇಳೆ ಓರ್ವ ಪರಾರಿಯಾದ ಖೈದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಖೈದಿಗಳು ಪರಾರಿಯಾದ ಹಿನ್ನೆಲೆ ನೆರೆಯ ಜಿಲ್ಲೆಗಳಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಿಂಡಿಗಲ್ ಜಿಲ್ಲೆಯ 16 ಸ್ಥಳಗಳಲ್ಲಿ ವಾಹನಗಳ ತಪಾಸಣೆಗಾಗಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಈ ಕುರಿತು ದಿಂಡಿಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಮಾಹಿತಿ ನೀಡಿದ್ದಾರೆ.ಪೊಲೀಸರ ಪ್ರಕಾರ, ಪರಾರಿಯಾದ ಎಲ್ಲಾ 17 ಆರೋಪಿಗಳನ್ನು ಒಂದೇ ಸೆಲ್ನಲ್ಲಿ ಇರಿಸಲಾಗಿತ್ತು. ಅವರಲ್ಲಿ ಓರ್ವ ಖೈದಿಗೆ ಅನಾರೋಗ್ಯ ಉಂಟಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಜೈಲು ಸಿಬ್ಬಂದಿ ಸೆಲ್ಗೆ ತೆರಳಿದ್ದರು. ಈ ವೇಳೆ ಖೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆಘಟನೆಯಲ್ಲಿ ಥೇಣಿ ಜಿಲ್ಲಾ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-2 ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ಗಾಯವಾಗಿದೆ. ಅವರನ್ನು ಜಿ. ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಬ್ಬರು ಜೈಲು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆದಿಗಳ ಪರಾರಿ ಕುರಿತು ನೆರೆಯ ಜಿಲ್ಲೆಗಳ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಇಡುಕ್ಕಿ, ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪರಾರಿಯಾದ ಖೈದಿಗಳನ್ನು ಗುರುತಿಸಿ ಬಂಧಿಸಲು ಅವರ ಭಾವಚಿತ್ರಗಳನ್ನು ಪೊಲೀಸ್ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಳಿದ ಪರಾರಿಯಾದ ಖೈದಿಗಳನ್ನು ಪತ್ತೆಹಚ್ಚಲು ವಿವಿಧ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.