ಆಕಾಶದಲ್ಲೇ ಎರಡು ಸೇನಾ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್‌ಗಳು ಸಾ*ವು!

ಮನಿಲಾ: ಫಿಲಿಪ್ಪೀನ್ಸ್‌ನ (Philippines) ವಾಯುನೆಲೆಯೊಂದರಲ್ಲಿ ತರಬೇತಿಯ ವೇಳೆ ಎರಡು ಸೇನಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿದ್ದು, ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮನಿಲಾದ ದಕ್ಷಿಣಕ್ಕಿರುವ ಫರ್ನಾಂಡೊ ವಾಯುನೆಲೆಯಲ್ಲಿ SF-260 ಏಕ-ಪ್ರೊಪೆಲ್ಲರ್ ವಿಮಾನಗಳು ಪತನಗೊಂಡವು.
ಎರಡೂ ವಿಮಾನಗಳು ಬೇಸ್ ಆವರಣದ ಒಳಗೇ ಪತನಗೊಂಡವು ಎಂದು ಫಿಲಿಪೈನ್ ವಾಯುಪಡೆಯ ವಕ್ತಾರ ಕರ್ನಲ್ ಆಲ್ವಿನ್ ಕ್ಯಾಪಿಂಗುಯಿಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದುರ್ಘಟನೆಗೆ ಕಾರಣ ತಿಳಿಯಲು ತನಿಖೆಯನ್ನು ಆರಂಭಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಯುಪಡೆಯ SF-260 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕ್ಯಾಪಿಂಗುಯಿಯನ್ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಫಿಲಿಪೈನ್ಸ್ ಮಿಲಿಟರಿ ವಿಮಾನಗಳು ಒಳಗೊಂಡ ಹಲವಾರು ಮಾರಣಾಂತಿಕ ಅಪಘಾತಗಳು ನಡೆದಿವೆ. ಮೇ ತಿಂಗಳಲ್ಲಿ ಉತ್ತರ ಫಿಲಿಪ್ಪೀನ್ಸ್‌ನ ಬೆಂಗ್ಯುಟ್ ಪ್ರಾಂತ್ಯದಲ್ಲಿ ತರಬೇತಿ ಹಾರಾಟದ ವೇಳೆ SF-260 ವಿಮಾನವೊಂದು ಪತನಗೊಂಡಾಗ, ಇಬ್ಬರು ಸೇನಾ ಪೈಲಟ್‌ಗಳು ಮೃತಪಟ್ಟಿದ್ದರು.