ರೆಸ್ಯುಮ್‌ನಲ್ಲಿ ಕನ್ನಡ ಇದ್ದರೆ ರಿಜೆಕ್ಟ್? ಐಟಿ ಕಂಪನಿ ವಿರುದ್ಧ ಯುವತಿ ಆಕ್ರೋಶ!

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಕಡೆಗಣಿಸಿರುವ ಆರೋಪ ಕೇಳಿಬಂದಿದೆ. ರೆಸ್ಯುಮ್‌ನಲ್ಲಿ ಕನ್ನಡ ಇದ್ರೆ, ಕೆಲಸಕ್ಕೆ ತೆಗೆದುಕೊಳ್ಳಲ್ಲ ಎಂದು ಆರೋಪಿಸಿ ಯುವತಿ ವೀಡಿಯೊ ಹಂಚಿಕೊಂಡಿದ್ದಾರೆ.

ಐಟಿ ಕಂಪನಿಗೆ ಸೇರಬೇಕು ಅಂದ್ರೆ ಕನ್ನಡ ಬೇಡ್ವಂತೆ. ರೆಸ್ಯುಮ್‌ನಲ್ಲಿ ಕನ್ನಡ ಇದ್ರೆ ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸಲಾಗುತ್ತದೆ. ತಮಿಳು, ತೆಲುಗು ಭಾಷೆಗೆ ಮಾನ್ಯತೆ ನೀಡಲಾಗಿದೆ. ಕನ್ನಡಕ್ಕೆ ಅಪಮಾನ ಮಾಡಲಾಗಿದೆ. esthenos technologies pvt. ltd ರೆಸ್ಯೂಮ್‌ನಲ್ಲಿ ಕನ್ನಡಕ್ಕಿಲ್ಲ ಮಾನ್ಯತೆ ಇಲ್ಲ. ಮಾತೃಭಾಷೆ ಕನ್ನಡ ಇದ್ದರೆ ಇಂಟರ್‌ವ್ಯೂನಲ್ಲಿ ರಿಜೆಕ್ಟ್ ಮಾಡುತ್ತಾರೆಂಬ ಆರೋಪ ಕೇಳಿಬಂದಿದೆ.
ಕಂಪನಿಯ ವಿರುದ್ಧ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಗುಡುಗಿದ್ದಾರೆ. ಕನ್ನಡಕ್ಕಾದ ಅಪಮಾನದ ಬಗ್ಗೆ ವೀಡಿಯೋ ಮೂಲಕ ಯುವತಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂಟರ್‌ವ್ಯೂನಲ್ಲಿ ನಮ್ಮ ಬೆಂಗಳೂರಿನ ಕಾಲೇಜುಗಳಲ್ಲಿ ಕಂಡಕ್ಟ್ ಮಾಡ್ತಿಲ್ಲ. ಕಡಿಮೆ ಸ್ಯಾಲರಿಗೆ ಬರ್ತಾರೆ ಅಂತ ಬೇರೆ ಕಡೆಯಿಂದ ಕರ್ಕೊಂಡು ಬರ್ತಾರೆ. ಇದರಿಂದ ನಮಗೆ ಅವಕಾಶ ಸಿಗ್ತಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ಅವರು ಇದಕ್ಕೆ ಪರಿಹಾರ ಕೊಡಿ ಎಂದು ಮನವಿ ಮಾಡಿದ್ದಾರೆ.ಕನ್ನಡಿಗರಿಗೆ ಐಟಿ ಕಂಪನಿಗಳಲ್ಲಿ ಕೆಲಸ ನಿರಾಕರಣೆ ಆರೋಪ ವಿಚಾರವಾಗಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾ ಖಾತೆಯಲ್ಲಿ ನೊಂದ ಕನ್ನಡದ ಉದ್ಯೋಗಿಗಳು ರೂಪೇಶ್ ರಾಜಣ್ಣಗೆ ಮಾಹಿತಿ ನೀಡಿದ್ದಾರೆ.ಕನ್ನಡಿಗರಿಗೆ ಐಟಿ ಕಂಪನಿಗಳಲ್ಲಿ ಕೆಲಸ ನಿರಾಕರಣೆ ಆರೋಪ ವಿಚಾರವಾಗಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾ ಖಾತೆಯಲ್ಲಿ ನೊಂದ ಕನ್ನಡದ ಉದ್ಯೋಗಿಗಳು ರೂಪೇಶ್ ರಾಜಣ್ಣಗೆ ಮಾಹಿತಿ ನೀಡಿದ್ದಾರೆ.