ಶಾಲೆ ಮೇಲ್ಛಾವಣಿ ಕುಸಿದು ದಾರುಣ ದುರಂತ: 21 ಮಕ್ಕಳು ಸೇರಿ 22 ಮಂದಿ ಸಾ*ವು!

ಇಸ್ಲಾಮಾಬಾದ್: ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳು ಸೇರಿದಂತೆ ಒಟ್ಟು 22 ಜನರು ಸಾವನ್ನಪ್ಪಿರುವ ದಾರುಣ ಘಟನೆ ಪಾಕಿಸ್ತಾನದ (Pakistan) ಪೇಶಾವರದ (Peshwar) ಆಫ್ರಿದಿ ಅಬಾದ್ ಪ್ರದೇಶದಲ್ಲಿ ನಡೆದಿದೆ.ಅಲ್ ಖೈರ್ (Al Khair) ಶಾಲೆಯಲ್ಲಿ ಈ ದುರಂತ ಸಂಭವಿಸಿದ್ದು, ತರಗತಿಗೆ ಮಕ್ಕಳು ಆಗಮಿಸುತ್ತಿದ್ದಾಗ ಏಕಾಏಕಿ ಮೇಲ್ಛಾವಣಿ ಕುಸಿದಿದೆ. ಪರಿಣಾಮ ಓರ್ವ ಶಿಕ್ಷಕಿ ಹಾಗೂ 21 ಮಕ್ಕಳು ಸಾವನ್ನಪ್ಪಿದ್ದಾರೆ.ಸಾವನ್ನಪ್ಪಿದವರ ಪೈಕಿ 7 ರಿಂದ 12 ವರ್ಷದೊಳಗಿನ 18 ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಲ್ಲದೇ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, 21 ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಸದ್ಯ ಸ್ಥಳಕ್ಕೆ ರಕ್ಷಣಾ ಪಡೆಗಳು ದೌಡಾಯಿಸಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಅವಶೇಷಗಳಡಿಯಲ್ಲಿ ಯಾರಾದರೂ ಸಿಲುಕಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
