Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಜಾರ್ಖಂಡ್ ಮೂಲದ ಯುವಕ ನೀರುಪಾಲು!

Spread the love

ರಾಯಚೂರು: ಕೃಷ್ಣಾ ನದಿಯ (Krishna River) ಅಪಾಯ ಸ್ಥಳದಲ್ಲಿ ಈಜಲು ಹೋಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ರಾಯಚೂರಿನ (Raichur) ದೇವಸುಗೂರು ಬಳಿ ನಡೆದಿದೆ.

ಜಾರ್ಖಂಡ್ ಮೂಲದ 20 ವರ್ಷದ ಸುನಿಲ್ ಪಹಾಡಿಯಾ ಮೃತ ದುರ್ದೈವಿ. ಖಾಸಗಿ ಫಾರ್ಮಾ ಕಂಪನಿಯಲ್ಲಿ ಹೆಲ್ಪರ್ ಕೆಲಸದಲ್ಲಿದ್ದ ಸುನಿಲ್ ತನ್ನ ಸ್ನೇಹಿತನ ಜೊತೆ ಈಜಲು ಕೃಷ್ಣಾ ನದಿ ಸೇತುವೆ ಬಳಿ ಹೋಗಿದ್ದಾಗ ದುರ್ಘಟನೆ ನಡೆದಿದೆ.

ಅಗ್ನಿ ಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನದಿಯಿಂದ ಶವ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ಘಟನೆ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


Spread the love
Share:

administrator

Leave a Reply

Your email address will not be published. Required fields are marked *