ಬೆಂಗಳೂರು: ನೈಸ್ ರಸ್ತೆ ಬಳಿ ಮಾಜಿ ಡ್ರೈವರ್ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಫೈರಿಂಗ್

ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನನ ಕಾಲಿಗೆ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ ಎಂಬಾತನಿಂದ ಫೈರಿಂಗ್ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಶ್ರೀನಿವಾಸ್, ಸಂಪಂಗಿ ಬಳಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದವೇಳೆ ವೈಯಕ್ತಿಕ ವಿಚಾರವಾಗಿ ಸೀನ ಮತ್ತು ಸಂಪಂಗಿ ನಡುವೆ ಗಲಾಟೆ ನಡೆದಿದೆ.
ಹೀಗಾಗಿ ಸುಮಾರು ಒಂದು ವರ್ಷದ ಹಿಂದೆ ಡ್ರೈವಿಂಗ್ ಕೆಲಸದಿಂದ ಸೀನನನ್ನ ತೆಗೆದುಹಾಕಲಾಗಿತ್ತು. ಇಬ್ಬರ ಮಧ್ಯೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಶ್ರೀನಿವಾಸ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಂಪಂಗಿ ಕಳೆದೊಂದು ತಿಂಗಳ ಹಿಂದೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು.
ನಿನ್ನೆ ಸಂಜೆ ಸಂಪಂಗಿ ಮೂವರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಬೈಕ್ನಲ್ಲಿ ಬರುತ್ತಿದ್ದ ಶ್ರೀನಿವಾಸ್ನನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಸಂಪಂಗಿ ಲೈಸೆನ್ಸ್ ಹೊಂದಿರುವ ಬಂದೂಕಿನಿಂದ ಶ್ರೀನಿವಾಸ್ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಸದ್ಯಗಾಯಾಳು ಶ್ರೀನಿವಾಸ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
