Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹500 ಕೋಟಿ ರಕ್ಷಣಾ ಒಪ್ಪಂದದ ಗೌಪ್ಯ ಮಾಹಿತಿ ಸೋರಿಕೆ: ಮೂವರ ಬಂಧನ

Spread the love

ನವದೆಹಲಿ: 500 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿ ಪೂರೈಕೆ ಒಪ್ಪಂದಕ್ಕೆ (Defence Deal) ಸಂಬಂಧಿಸಿದಂತೆ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಕೇಂದ್ರ ತನಿಖಾ ದಳ (CBI) ಮೂವರನ್ನ ಬಂಧಿಸಿದೆ.ಮ್ಯೂನಿಷನ್ಸ್ ಇಂಡಿಯಾ (Munitions India) ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಅವರ ಸಹೋದರ ಬಿ. ಹರ್ಷವರ್ಧನ್ ಹಾಗೂ ಖಾಸಗಿ ರಕ್ಷಣಾ ಕಂಪನಿ ಎಸ್‌ಎಂಪಿಪಿ ಲಿಮಿಟೆಡ್‌ನ ಸಿಇಒ ಆಷಿಶ್ ಕನ್ಸಲ್ ಬಂಧಿತ ಆರೋಪಿಗಳು.ಲಂಚ ಪಡೆದು ರಕ್ಷಣಾ ಉತ್ಪಾದನೆ ಮತ್ತು ಖರೀದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನ ಸೋರಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರನ್ನ ಬಂಧಿಸಲಾಗಿದ್ದು, ಪ್ರಕರಣ ಕೂಡ ದಾಖಲಾಗಿದೆ.ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ. ಪುಣೆ, ಮೈಸೂರು, ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಸಿದ ಶೋಧದ ವೇಳೆ ಒಟ್ಟು 2.23 ಕೋಟಿ ನಗದು ಹಾಗೂ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ.

ಅಕ್ಟೋಬರ್ 12ರಂದು ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಅಕ್ಟೋಬರ್ 13ರಂದು ಮೂವರು ಆರೋಪಿಗಳನ್ನ ಬಂಧಿಸಿದೆ. ಪ್ರಕರಣದ ಕುರಿತು ಸಿಬಿಐನಿಂದ ಮುಂದಿನ ತನಿಖೆ ಮುಂದುವರಿದಿದೆ.


Spread the love
Share:

administrator

Leave a Reply

Your email address will not be published. Required fields are marked *