Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಸ್ ಕ್ರೀಂ ಘಟಕಗಳ ಮೇಲೆ ಎಫ್‌ಡಿಎ ದಾಳಿ: ಅವಧಿ ಮೀರಿದ ವಸ್ತುಗಳು ಜಪ್ತಿ!

Spread the love

ಬೆಂಗಳೂರು: ಐಸ್ ಕ್ರೀಂ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ಮೇರೆಗೆ ಸುಮಾರು 45 ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆದಿದೆ. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.

ಜಯನಗರ 3ನೇ ಬ್ಲಾಕ್‌ನಲ್ಲಿ ಐಸ್ ಕ್ರೀಂ ಘಟಕವೊಂದರ ಮೇಲೆ ದಾಳಿ ನಡೆಯಿತು. ಈ ವೇಳೆ ಅವಧಿ ಮೀರಿದ ಬ್ರಿಟಾನಿಯ ಬಿಸ್ಕೆಟ್, ನಂದಿನಿ ಸಮೃದ್ದಿ ಮಿಲ್ಕ್ , ಟೀ ಮತ್ತು ಕಾಫಿ ಮಿಕ್ಸ್ ಕೋಕನೆಟ್ ಪೌಡರ್ ಬಳಕೆ ಮಾಡ್ತಿರೋದು ಪತ್ತೆಯಾಗಿದೆ. ಲೇಬಲಿಂಗ್ ದೋಷ, FSSAI ಕಾಯ್ದೆ 2006, 2011 ಉಲ್ಲಂಘನೆಯಾಗಿದ್ದು, ಕಾನೂನು ಕ್ರಮಕೈಗೊಳ್ಳಲಾಗಿದೆ.ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಕೂಡ ಘಟಕವೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಇಲ್ಲಿ ಕೂಡ ಅವಧಿ ಮೀರಿದ Plain Cotic Caramel, Nestle Milk Made, Milky Mist Khoa – ಅವಧಿ ಮೀರಿದ/ಲೇಬಲ್ ಇಲ್ಲದ ಪದಾರ್ಥ ಬಳಕೆಯಾಗಿರುವುದು ಕಂಡುಬಂದಿದೆ.

ರಾಯಚೂರು ಮತ್ತು ಮೈಸೂರಿನಲ್ಲೂ ಐಸ್ ಕ್ರೀಂ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ರಾಯಚೂರಿನ ಘಟಕವೊಂದರಲ್ಲಿ ಸ್ವಚ್ಛತೆ ಇಲ್ಲ, ಹೈಜೀನ್ ಇಲ್ಲದ ವಾತಾವರಣದಲ್ಲಿ ಐಸ್ ಕ್ರೀಂ ತಯಾರಿಕೆ ಮಾಡಲಾಗುತ್ತಿತ್ತು. ನೋಟಿಸ್ ಜಾರಿ ಮಾಡಲಾಗಿದೆ.

ಮೈಸೂರಿನ ಘಟಕದಲ್ಲಿ ಲೈಸೆನ್ಸ್ ಇಲ್ಲದೆ ತಯಾರಿಕೆ, ಲೇಬಲ್ ಇಲ್ಲದೆ 20,000 ರೂ. ಮೌಲ್ಯದ ಐಸ್ ಕ್ರೀಂ ಮತ್ತು ಕಚ್ಚಾ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಇನ್ನೂ ತಪಾಸಣೆ ಮುಂದುವರಿದಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *