Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಕಲಿ ಅಧಿಕಾರಿಯೊಂದಿಗೆ ಮದುವೆ, ಲಕ್ಷಾಂತರ ಮೌಲ್ಯದ ಒಡವೆಗಳೊಂದಿಗೆ ಪರಾರಿ: ಎಎಪಿ ನಾಯಕನಿಗೆ ಬಿಗ್ ಶಾಕ್!

Spread the love

ಚಂಡೀಗಢ: ಅಧಿಕಾರಿಯಂತೆ ನಟಿಸಿ ಪಂಜಾಬ್‌ನ ಆಪ್‌ (APP) ನಾಯಕರೊಬ್ಬರನ್ನು ಮದುವೆಯಾಗಿದ್ದ (Marriage) ಮಹಿಳೆಯೊಬ್ಬಳು (Woman) ಕೆಲವೇ ತಿಂಗಳುಗಳಲ್ಲಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ.ಎಎಪಿ ಜಂಟಿ ಕಾರ್ಯದರ್ಶಿ ಅಮರಿಂದರ್ ಸಿಂಗ್ ಮಂಡೋಫಾಲ್‌ ವಂಚನೆಗೊಳಗಾದವರು. ಅವರು ಫೆಬ್ರವರಿ 2026ರಲ್ಲಿ ಮನ್ವಿಂದರ್ ಕೌರ್ ಅವರನ್ನು ಮದುವೆಯಾಗಿದ್ದರು. ಆಕೆಯ ಕುಟುಂಬದವರು ಅಮರಿಂದರ್ ಅವರಿಗೆ ಮಹಿಳೆಯನ್ನು ಪಿಸಿಎಸ್ ಅಧಿಕಾರಿ ಎಂದು ಪರಿಚಯಿಸಿದ್ದರು. ಆಕೆ ಅವಿವಾಹಿತೆ ಎಂದು ಹೇಳಿದ್ದರು. ಆದರೆ ಆಕೆಗೆ ಈಗಾಗಲೇ ಮದುವೆ ಆಗಿತ್ತು. ಅಲ್ಲದೇ ಆಕೆ ತನ್ನ ವಯಸ್ಸಿನ ಬಗ್ಗೆಯೂ ಸುಳ್ಳು ಮಾಹಿತಿ ನೀಡಿದ್ದಳು ಎಂದು ಅಮರಿಂದರ್ ದೂರಿದ್ದಾರೆ.ಮದುವೆಯಾದ ಕೆಲವೇ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ. ಆಕೆಯ ಬಗ್ಗೆ ಮಾಹಿತಿ ಕಲೆಹಾಕಿದಾಗ, ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿರುವುದು ತಿಳಿದುಬಂದಿದೆ. ಆಕೆಗೆ 18 ವರ್ಷದ ಮಗನಿದ್ದಾನೆ. ನನಗೆ ವಂಚನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಮರಿಂದರ್ ಸಿಂಗ್‌ ನೀಡಿದ ದೂರಿನ ಮೇರೆಗೆ, ಪೊಲೀಸರು ಕೌರ್ ಸೇರಿದಂತೆ ಆರು ಮಂದಿಯ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ (ಫೋರ್ಜರಿ) ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಆಕೆಯ ಸಹೋದರ ತಾರ್ಲೋಚನ್ ಸಿಂಗ್, ತಾಯಿ ವರಿಂದರ್‌ಜಿತ್ ಕೌರ್, ಸೋದರಸಂಬಂಧಿ ನರಿಂದರ್ ಸಿಂಗ್ ಗೋಲ್ಡಿ, ನಾದಿನಿ ರುಪಿಂದರ್ ಕೌರ್ ಮತ್ತು ಮಾಜಿ ಗ್ರಾಮ ಸರಪಂಚ್ ಸುರಿಂದರ್ ಸಿಂಗ್ ರಾಣಾನನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಎಲ್ಲಾ ಆರೋಪಿಗಳು ತರ್ನ್ ತರನ್ ಜಿಲ್ಲೆಯ ಭಿಖಿವಿಂದ್ ಪೊಲೀಸ್ ಠಾಣಾ ವ್ಯಾಪ್ತಿಯ ಸುರ್ ಸಿಂಗ್ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *