Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀರಿನ ಬಿಕ್ಕಟ್ಟಿನ ನಡುವೆ ವಿಐಪಿ ಸಂಸ್ಕೃತಿ: ಶಾಸಕರ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ!

Spread the love

ಅಹಮದಾಬಾದ್: ನೀರಿನ ಕೊರತೆ ಎದುರಿಸುತ್ತಿರುವ ದಾಹೋಡ್ ಜಿಲ್ಲೆಯಲ್ಲಿ ಶಾಸಕ ಬಚ್ಚು ಖಬಡ್ ಅವರ ಬಂಗಲೆ ಸ್ವಚ್ಛಗೊಳಿಸಲು ನಗರಪಾಲಿಕೆಯ ಅಗ್ನಿಶಾಮಕ ವಾಹನ ಬಳಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
4 ಮಾಜಿ ಸಚಿವ ಹಾಗೂ ದೇವಗಢ ಬರಿಯಾದ ಹಾಲಿ ಶಾಸಕ ಬಚ್ಚು ಖಬಡ್ ಅವರ ಕಡೆಯಿಂದ ಬಂದ ದೂರವಾಣಿ ಕರೆಯ ಮೇರೆಗೆ ಅಗ್ನಿಶಾಮಕ ವಾಹನವನ್ನು ಅವರ ನಿವಾಸಕ್ಕೆ ಕಳುಹಿಸಲಾಗಿತ್ತು. ಆದರೆ, ಅಗ್ನಿಶಾಮಕ ವಾಹನವನ್ನು ಬಂಗಲೆ ಸ್ವಚ್ಛಗೊಳಿಸಲು ಬಳಸಲಾಗುತ್ತಿದೆ ಎಂಬುದು ಅಧಿಕಾರಿಗಳಿಗೆ ಆರಂಭದಲ್ಲಿ ತಿಳಿದಿರಲಿಲ್ಲ ಎಂದು ನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನದಿಂದ ಬಂಗಲೆಗೆ ನೀರು ಸಿಂಪಡಿಸಲಾಗುತ್ತಿದೆ ಎಂಬುದು ಗೊತ್ತಾದ ಕೂಡಲೇ ಅಧಿಕಾರಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ವಾಹನವನ್ನು ವಾಪಸ್ ಕರೆಸಿಕೊಂಡರು. ಬಳಿಕ, ನೀರು ಸಿಂಪಡಿಸಿದ್ದಕ್ಕಾಗಿ ಖಬಡ್ ಅವರಿಂದ 2,750 ರೂ. ದಂಡ ವಸೂಲಿ ಮಾಡಲಾಗಿದೆ.
ದೇವಗಢ ಬರಿಯಾ ನಗರಪಾಲಿಕೆ ಅಧ್ಯಕ್ಷ ಧರ್ಮೇಶ್ ಕಲಾಲ್ ಅವರ ಪ್ರಕಾರ, ಅಗ್ನಿಶಾಮಕ ಇಲಾಖೆಗೆ ಸಾಮಾನ್ಯವಾಗಿ ಯಾವುದೇ ಕರೆ ಬಂದರೂ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಾರೆ. ಅದರಲ್ಲೂ ಚುನಾಯಿತ ಜನಪ್ರತಿನಿಧಿಯಿಂದ ಕರೆ ಬಂದಾಗ ಉದ್ದೇಶವನ್ನು ಪ್ರಶ್ನಿಸದೆ ಸ್ಪಂದಿಸುವುದು ಇಲಾಖೆಯ ಸಾಮಾನ್ಯ ಕ್ರಮ. ಇದೇ ಕಾರಣಕ್ಕೆ ಖಬಡ್ ಅವರ ಕಡೆಯಿಂದ ಕರೆ ಬಂದಾಗ ವಾಹನ ಕಳುಹಿಸಲಾಗಿತ್ತು.

ಈ ಘಟನೆ ರವಿವಾರ ನಡೆದಿದ್ದರಿಂದ ಶುಲ್ಕ ವಿಧಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಬಳಿಕ, ನೀರು ಸಿಂಪಡಿಸಿದ್ದಕ್ಕಾಗಿ ಅನ್ವಯಿಸುವ ಶುಲ್ಕವನ್ನು ಖಬಡ್ ಪಾವತಿಸಿದ್ದಾರೆ ಎಂದು ಕಲಾಲ್ ಸ್ಪಷ್ಟಪಡಿಸಿದ್ದಾರೆ.
‘ನೀರಿನ ಕೊರತೆಯಲ್ಲೂ VIP ಸೇವೆ
ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಜಿಲ್ಲೆಯ ಜನರು ನೀರಿನ ಕೊರತೆ ಎದುರಿಸುತ್ತಿರುವಾಗ ಶಾಸಕರ ಬಂಗಲೆ ಸ್ವಚ್ಛಗೊಳಿಸಲು ಅಗ್ನಿಶಾಮಕ ವಾಹನ ಬಳಸಿರುವುದು VIP’ ಸಂಸ್ಕೃತಿಗೆ ಉದಾಹರಣೆ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ.
ಬಚ್ಚು ಖಬಡ್ ಕುಟುಂಬ ಈ ಹಿಂದೆ ಕೂಡ ವಿವಾದಕ್ಕೆ ಸಿಲುಕಿತ್ತು. 2025ರ ಮೇ ತಿಂಗಳಲ್ಲಿ ಮನರೇಗಾ ಯೋಜನೆಯ ಬಹುಕೋಟಿ ಹಗರಣದ ಆರೋಪದಲ್ಲಿ ಅವರ ಪುತ್ರರಾದ ಬಲ್ವಂತ್ ಖಬಡ್ ಹಾಗೂ ಕಿರಣ್ ಖಬಡ್ ಅವರನ್ನು ದಾಹೋಡ್ ಪೊಲೀಸರು ಬಂಧಿಸಿದ್ದರು. ಆದರೆ, ತಮ್ಮ ಕುಟುಂಬದ ಮೇಲಿನ ಆರೋಪಗಳನ್ನು ಬಚ್ಚು ಖಬಡ್ ನಿರಾಕರಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *