Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಗ್ರಿಗೋಲ್ಡ್ ಸಂತ್ರಸ್ತರಿಗೆ ಬಿಗ್ ರಿಲೀಫ್ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಕರ್ನಾಟಕ ರಾಜ್ಯ ಅಸಂಘಟಿತ ಒಕ್ಕೂಟ ರಾಜ್ಯಾಧ್ಯಕ್ಷರು ಸಿ. ರಾಘವೇಂದ್ರ ಕುಂಬ್ಳೆ

Spread the love

ಅಮರಾವತಿ: ಅಗ್ರಿಗೋಲ್ಡ್‌ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮಹತ್ವದ ಪರಿಹಾರ ನೀಡಲು ಮುಂದಾಗಿದೆ. ಅಗ್ರಿಗೋಲ್ಡ್‌ ಲೇಔಟ್‌ಗಳನ್ನು ಖರೀದಿಸಲು ಹಣ ಪಾವತಿಸಿ ನೋಂದಣಿ ಮಾಡಿಕೊಂಡಿರುವವರ ಜಮೀನುಗಳನ್ನು ನಿಷೇಧಿತ ಪಟ್ಟಿಯಿಂದ ತೆಗೆದುಹಾಕಲು ಸಚಿವ ಸಂಪುಟ ಉಪಸಮಿತಿ ನಿರ್ಧರಿಸಿದೆ.

ಮೊದಲ ಹಂತದಲ್ಲಿ 35,444 ಸಂತ್ರಸ್ತರಿಗೆ ಇದರ ಪ್ರಯೋಜನ ದೊರೆಯಲಿದ್ದು, ಎರಡನೇ ಹಂತದಲ್ಲಿ ಮತ್ತಷ್ಟು 6,980 ಸಂತ್ರಸ್ತರನ್ನು ಪರಿಗಣಿಸಲು ನಿರ್ಧರಿಸಲಾಗಿದೆ.

ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ನಿರ್ಧಾರವನ್ನು ಅಖಿಲ ಭಾರತ ಅಗ್ರಿಗೋಲ್ಡ್ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಸಿ. ರಾಘವೇಂದ್ರ ಕುಂಬ್ಳೆ ಅವರು ಸ್ವಾಗತಿಸಿದ್ದಾರೆ.

ಅಗ್ರಿಗೋಲ್ಡ್‌ ಸಂತ್ರಸ್ತರ ಬಹುದಿನಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮವನ್ನು ಅವರು ಸ್ವಾಗತಿಸಿದ್ದು, ಸಂತ್ರಸ್ತರಿಗೆ ನ್ಯಾಯ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಇನ್ನು ಸಂತ್ರಸ್ತರಿಂದ ಅಗತ್ಯ ದಾಖಲೆಗಳು ಹಾಗೂ ಬಾಂಡ್‌ಗಳ ವಿವರಗಳನ್ನು ಸಂಗ್ರಹಿಸಲು ವಿಶೇಷ ತಂಡಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಅಗ್ರಿಗೋಲ್ಡ್‌ ಹೂಡಿಕೆದಾರರಿಗೆ ಪರಿಹಾರ ಒದಗಿಸುವ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.


Spread the love
Share:

administrator

Leave a Reply

Your email address will not be published. Required fields are marked *