ಕುಚ್ಚೂರು: ಮನೆ ಹಟ್ಟಿಯ ಹಿಂಭಾಗದಲ್ಲಿ ಪ್ರತ್ಯಕ್ಷವಾದ ಅಪರೂಪದ ಕಪ್ಪು ಚಿರತೆ – ಸ್ಥಳೀಯರಲ್ಲಿ ತೀವ್ರ ಆತಂಕ!

ಹೆಬ್ರಿ : ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳಂಜೆ ದೊಡ್ಡಮನೆ ಗಣೇಶ್ ಶೆಟ್ಟಿ ಎಂಬುವರ ಮನೆಯ ಹಟ್ಟಿಯ ಹಿಂಭಾಗದಲ್ಲಿ ಭಾನುವಾರ ಮುಂಜಾನೆ ಅಪರೂಪದ ಕಪ್ಪು ಚಿರತೆ ಯೊಂದು ಪ್ರತ್ಯಕ್ಷವಾಗಿದೆ.

ಕಳೆದ ಕೆಲವು ಸಮಯದಿಂದ ಬೇಳಂಜೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಪ್ಪು ಚಿರತೆ ಸತತವಾಗಿ ಓಡಾಟ ನಡೆಸುತ್ತಿದ್ದು, ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕ ಹಾಗೂ ಭಯದ ವಾತಾವರಣದಲ್ಲಿ ದಿನ ದೂಡುವಂತಾಗಿದೆ. ಮನೆಗಳ ಹಾಗೂ ದನದ ಕೊಟ್ಟಿಗೆಗಳ ಸಮೀಪವೇ ಚಿರತೆ ಪ್ರತ್ಯಕ್ಷವಾಗುತ್ತಿರುವುದರಿಂದ ಸಾಕುಪ್ರಾಣಿಗಳು ಮತ್ತು ಸಾರ್ವಜನಿಕರ ರಕ್ಷಣೆಗೆ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಚಿರತೆಯನ್ನು ಬಂದಿಸಲು ಬೋನು ಅಳವಡಿಸಿ ಸೆರೆಹಿಡಿಯಬೇಕೆಂದು ಸ್ಥಳೀಯ ಮುಖಂಡ ಅಮೃತ್ ಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.