Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತುಳು ಭಾಷಿಕರ ಬಹುದಿನಗಳ ನಿರೀಕ್ಷೆಗೆ ಜಯ: ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ಘೋಷಣೆ!

Spread the love

ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ದೊರೆತಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಘೋಷಿಸಿದರು.ಭಾಷ ಬಳಕೆ ಹಾಗೂ ಅಭಿವೃದ್ದಿಗೆ ಸಂಬಂಧಿತ ಚಟುವಟಿಕೆಗಳಿಗಾಗಿ ಪ್ರತಿವರ್ಷ 82 ಲಕ್ಷ ರೂ. ಅನುದಾನವನ್ನೂ ಘೋಷಿಸಲಾಗಿದೆ. ಕರಾವಳಿ ಕರ್ನಾಟಕದ ಅಭಿವೃದ್ದಿಗೆ 32.600 ಕೋಟಿ ರೂ ಮೀಸಲಿಡಲಾಗುವುದು ಎಂದು ಡಿಕೆ ಶಿವಕುಮಾರ್‍ ಹೇಳಿದರು. ೧೬, ೦೦೦ ಕೋಟಿ ರೂ ರಸ್ತೆ ಅಭಿವೃದ್ದಿಗೆ ಮತ್ತು ೧೬, ೦೦೦ ಕೋಟಿ ರೂ. ಕರಾವಳ ಅಭಿವೃದ್ದಿಗೆ ನಿಧಿ ನೀಡಲಾಗುವುದು ಎಂದರು.ಮಲೆನಾಡು ಮತ್ತು ಕರಾವಳಿಗೆ ಪ್ರತ್ಯೇಕ ಟೂರಿಸಂ ಪಾಲಿಸಿ ಮಾಡುತ್ತೇವೆ ಎಂದರು.


Spread the love
Share:

administrator

Leave a Reply

Your email address will not be published. Required fields are marked *