ಅಥೆನ್ಸ್: ಗ್ರೀಸ್ನಲ್ಲಿ ವಾರ್ಷಿಕ ಏರ್ ಶೋ ವೇಳೆ ವಾಯುಪಡೆಯ ಜೆಟ್ ವಿಮಾನ ಪತನ; ಇಬ್ಬರು ಪೈಲಟ್ಗಳು ಸಾ*ವು!

ಅಥೆನ್ಸ್: ಗ್ರೀಸ್ನಲ್ಲಿ ಶನಿವಾರ ವಾರ್ಷಿಕ ಏರ್ ಶೋ ಸಂದರ್ಭ ಅಥೆನ್ಸ್ನ ಉತ್ತರ ಭಾಗದಲ್ಲಿ ವಾಯುಪಡೆಯ ಜೆಟ್ ವಿಮಾನ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಟ್ ವಿಮಾನವು ಕಡಿಮೆ ಎತ್ತರದಲ್ಲಿ ಸಾಹಸ ಪ್ರದರ್ಶನ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಕಪ್ಪು ಹೊಗೆಯ ಮೋಡಗಳು ಎದ್ದವು. ಪ್ರೇಕ್ಷಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅಪಘಾತದ ಹಿನ್ನೆಲೆಯಲ್ಲಿ ಸಂಘಟಕರು ವಾರಾಂತ್ಯದಲ್ಲಿ ಯೋಜಿಸಲಾಗಿದ್ದ ಉಳಿದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಹಾಗೆಯೇ, ವಾಯುನೆಲೆಯ ಹತ್ತಿರದ ಪ್ರದೇಶದಲ್ಲಿ ತೆರವುಗೊಳಿಸುವಂತೆ ಆದೇಶ ನೀಡಲಾಗಿದೆ.
