Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ನೋ-ಬಾಲ್ ಎಸೆದ ದಾಖಲೆ: ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ರವೀಂದ್ರ ಜಡೇಜಾ!

Spread the love

ಹೊಸದಿಲ್ಲಿ: ಭಾರತದ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ ಅವರ ನೋ-ಬಾಲ್ ಎಸೆಯುವ ಸಮಸ್ಯೆ ಇದೀಗ ಗಂಭೀರ ಚರ್ಚೆಗೆ ಗ್ರಾಸವಾಗಿದೆ. 2021ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಬರೋಬ್ಬರಿ 88 ನೋ-ಬಾಲ್‌ಗಳನ್ನು ಎಸೆದಿದ್ದು, ಸ್ಪಿನ್ನರ್‌ಗಳ ಪೈಕಿ ಇದು ಅತ್ಯಧಿಕ ಎಂದು ವರದಿಯಾಗಿದೆ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 3 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 1 ನೋ-ಬಾಲ್ ಎಸೆಯುವ ಮೂಲಕ ಜಡೇಜಾ ತಮ್ಮ ಈ ಕಳಪೆ ದಾಖಲೆಯನ್ನು ಮುಂದುವರಿಸಿದ್ದಾರೆ. 2021ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್ ಎಸೆದ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಜಡೇಜಾ 88 ನೋ-ಬಾಲ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ನೋಮನ್ ಅಲಿ 40, ಶ್ರೀಲಂಕಾದ ಲಸಿತ್ ಎಂಬುಲ್ಲೇನಿಯಾ 33 ಹಾಗೂ ಇಂಗ್ಲೆಂಡ್‌ನ ಜ್ಯಾಕ್ ಲೀಚ್ 19 ನೋ-ಬಾಲ್‌ಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.

ಟಿವಿ ಅಂಪೈರಿಂಗ್ ಬಳಿಕ ಹೆಚ್ಚಿದ ಸಮಸ್ಯೆ
2020ರ ಅಂತ್ಯದಿಂದ ಟಿವಿ ಅಂಪೈರ್‌ಗಳಿಗೆ ನೋ-ಬಾಲ್‌ಗಳನ್ನು ಗಮನಿಸುವ ಜವಾಬ್ದಾರಿ ನೀಡಿದ ಬಳಿಕ ಜಡೇಜಾ ಅವರ ಈ ಸಮಸ್ಯೆ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಅಂದಿನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕಗಿಸೊ ರಬಾಡ, ಬೆನ್ ಸ್ಟೋಕ್ಸ್ ಹಾಗೂ ಜಸ್‌ಪ್ರೀತ್ ಬುಮ್ರಾ ಮಾತ್ರ ಜಡೇಜಾಗಿಂತ ಹೆಚ್ಚು ನೋ-ಬಾಲ್‌ಗಳನ್ನು ಎಸೆದಿದ್ದಾರೆ.
2012ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ದಿನದಿಂದ 2020ರ ಅಂತ್ಯದವರೆಗೆ ಜಡೇಜಾ ಕೇವಲ 18 ನೋ-ಬಾಲ್‌ಗಳನ್ನು ಎಸೆದಿದ್ದರು. ಆದರೆ ಟಿವಿ ಅಂಪೈರಿಂಗ್ ಜಾರಿಗೆ ಬಂದ ಬಳಿಕ ಬರೋಬ್ಬರಿ 89 ಬಾರಿ ಓವರ್‌ಸ್ಟೆಪ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ಜಡೇಜಾ ಎರಡೂ ಇನಿಂಗ್ಸ್‌ಗಳಲ್ಲಿ ತಲಾ 2 ನೋ-ಬಾಲ್‌ಗಳನ್ನು ಎಸೆದಿದ್ದರು. ಅಷ್ಟೇ ಅಲ್ಲದೆ, ಧನಂಜಯ ಡಿ ಸಿಲ್ವಾ ನೀಡಿದ ಕ್ಯಾಚ್ ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಅವರ ಕೈ ಸೇರಿದ್ದರೂ, ಅದು ನೋ-ಬಾಲ್ ಆಗಿದ್ದರಿಂದ ಸಿಲ್ವಾಗೆ ಜೀವದಾನ ಲಭಿಸಿತು. ಈ ಘಟನೆ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು.
ಕೊಲಂಬೊ ಟೆಸ್ಟ್‌ನ ನಾಲ್ಕನೇ ದಿನದಂದು ಭಾರತೀಯ ಸ್ಪಿನ್ನರ್‌ಗಳು ಒಟ್ಟು 5 ನೋ-ಬಾಲ್‌ಗಳನ್ನು ಎಸೆದಿದ್ದು, ಪಂದ್ಯದಲ್ಲಿ ಸ್ಪಿನ್ನರ್‌ಗಳ ಒಟ್ಟು ನೋ-ಬಾಲ್‌ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದು ಭಾರತೀಯ ಬೌಲಿಂಗ್ ಪಡೆಯ ಶಿಸ್ತಿನ ಕೊರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


Spread the love
Share:

administrator

Leave a Reply

Your email address will not be published. Required fields are marked *