ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಜಾರಿಬಿದ್ದ ಕಬ್ಬಿಣದ ರಾಡ್ ಚುಚ್ಚಿ ಬೈಕ್ ಸವಾರ ದಾರುಣ ಸಾ*ವು

ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಕಬ್ಬಿಣದ ರಾಡ್ ಜಾರಿ ಬಿದ್ದು ಬೈಕ್ ಸವಾರನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಮೃತರನ್ನು ಕುಟ್ಟನೆಲ್ಲುರು ನಿವಾಸಿ ಶೆರಿನ್ ಜಾನ್ ಎಂದು ಗುರುತಿಸಲಾಗಿದೆ.
ಕುಟ್ಟನೆಲ್ಲುರು ಬಳಿಯ ಹೈಲೈಟ್ ಮಾಲ್ ಸಮೀಪ ನಿನ್ನೆ ಬೆಳಿಗ್ಗೆ 10:30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ರಾಡ್‌ಗಳು ವಾಹನದಿಂದ ಜಾರಿ ಬಿದ್ದು, ಅದರ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದ ಶೆರಿನ್ ಅವರ ಮೈಗೆ ಚುಚ್ಚಿದೆ.
ಸ್ಥಳೀಯರು ತಕ್ಷಣವೇ ಗಾಯಾಳು ಶೆರಿನ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಿಕಪ್ ವಾಹನವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
