Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ನಂಬರ್ 1 ಆಟಗಾರನನ್ನು ಮಣಿಸಿ ಇತಿಹಾಸ ಬರೆದ ಕರಾವಳಿಯ ಆಯುಷ್ ಶೆಟ್ಟಿ!

Spread the love

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ (ರೌಂಡ್ ಆಫ್ 64) ಕರ್ನಾಟಕದ ಕಾರ್ಕಳದ ಮೂಲದ 21 ವರ್ಷದ ಆಟಗಾರ ಯುವ ಆಟಗಾರ ಆಯುಷ್ ಶೆಟ್ಟಿ ಇತಿಹಾಸ ನಿರ್ಮಿಸಿದ್ದಾರೆ.

ಈ ಟೂರ್ನಿಯಲ್ಲಿ 20ನೇ ರ್‍ಯಾಂಕ್‌ನಲ್ಲಿರುವ ಅಯುಶ್‌ ಶೆಟ್ಟಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ನಂಬರ್ 1 ಆಟಗಾರನಾಗಿರುವ ಚೀನಾದ ಶೀ ಯು ಕಿ ಅವರನ್ನು ಸೋಲಿಸಿದ್ದಾರೆ.
ತವರಿನ ಪ್ರೇಕ್ಷಕರ ಪ್ರೋತ್ಸಾಹದ ನಡುವೆ ಭರ್ಜರಿ ಆರಂಭ ಪಡೆದ ಆಯುಷ್, ನೆಟ್ ಗೇಮ್ ಮತ್ತು ನಿಖರ ಸ್ಮ್ಯಾಶ್‌ಗಳ ಮೂಲಕ ಮೊದಲ ಗೇಮ್ ಅನ್ನು 21-14 ಅಂತರದಲ್ಲಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಬಲವಾದ ತಿರುಗೇಟು ನೀಡಿದ ಚೀನಾದ ಶೀ ಯು ಕಿ, 21-13 ಅಂತರದಿಂದ ಗೇಮ್ ಗೆದ್ದು ಸಮಬಲ ಸಾಧಿಸಿದರು.
ತೀವ್ರ ಹಣಾಹಣಿಯಿಂದ ಕೂಡಿದ ಅಂತಿಮ ಗೇಮ್‌ನಲ್ಲಿ ಅದ್ಭುತ ಸಂಯಮ ಮತ್ತು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಆಯುಷ್ ಶೆಟ್ಟಿ 21-19 ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದರು. ಈ ಗೆಲುವಿನೊಂದಿಗೆ ಆಯುಷ್ ಶೆಟ್ಟಿ 21-14, 13-21, 21-19 ಸೆಟ್‌ಗಳಿಂದ ವಿಶ್ವದ ಟಾಪ್‌ ಆಟಗಾರನನ್ನು ಮಣಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *