ನವದೆಹಲಿ: ತ್ವಿಶಾ ಶರ್ಮಾ ಸಾವಿನ ಪ್ರಕರಣ; ನಿವೃತ್ತ ನ್ಯಾಯಾಧೀಶೆ ಹಾಗೂ ಪುತ್ರನ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಕೆ!

ನವದೆಹಲಿ: ತ್ವಿಶಾ ಶರ್ಮಾ (Twisha Sharma) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಮತ್ತು ಅವರ ಪುತ್ರ ಸಮರ್ಥ್ ಸಿಂಗ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ.

ನಿವೃತ್ತ ನ್ಯಾಯಾಧೀಶೆ ಮತ್ತು ವಕೀಲರಾಗಿರುವ ಅವರ ಪುತ್ರ ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿದ್ದಾರೆ. ಮದುವೆಯಾದ ಐದು ತಿಂಗಳ ನಂತರ, ಮೇ 12 ರಂದು ಭೋಪಾಲ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು