Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಸಿದ್ಧ ‘ಬೈಟ್ ಆಫ್ ಸಿಯಾಟಲ್’ ಮೇಳದಲ್ಲಿ ನಡೆದ ಗುಂಡಿನ ದಾಳಿಯಿಂದ ಐವರಿಗೆ ಗಾಯ

Spread the love

ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಆಹಾರ ಉತ್ಸವದಲ್ಲಿಸಂಭವಿಸಿದ ಸಾಮೂಹಿಕ ಗುಂಡಿನ ದಾಳಿ(Firing) ಕನಿಷ್ಠ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ಪ್ರಖ್ಯಾತ ಪ್ರವಾಸಿ ತಾಣವಾದ ‘ಸ್ಪೇಸ್ ನೀಡಲ್’ ಬಳಿಯ ಸಿಯಾಟಲ್ ಸೆಂಟರ್‌ನಲ್ಲಿ ಈ ದುರಂತ ಸಂಭವಿಸಿದೆ.
ವಾರ್ಷಿಕವಾಗಿ ನಡೆಯುವ ‘ಬೈಟ್ ಆಫ್ ಸಿಯಾಟಲ್’ ಆಹಾರ ಉತ್ಸವದ ವೇಳೆ ಸಂಜೆ ಸುಮಾರು 6 ಗಂಟೆಗೆ ಈ ಗುಂಡಿನ ಚಕಮಕಿ ನಡೆದಿದೆ. ಉತ್ಸವದಲ್ಲಿ ನೂರಾರು ಅಡುಗೆ ಮಳಿಗೆಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ 7 ರಿಂದ 8 ಸುತ್ತು ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಗಾಬರಿಗೊಂಡ ಸಾರ್ವಜನಿಕರು ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಈ ವೇಳೆ ಕಾಲ್ತುಳಿತವೂ ಸಂಭವಿಸಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಿಯಾಟಲ್ ಪೊಲೀಸ್ ಇಲಾಖೆಯು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಸಾರ್ವಜನಿಕರು ಆ ಪ್ರದೇಶಕ್ಕೆ ತೆರಳದಂತೆ ಸೂಚಿಸಿದೆ. ದಾಳಿಕೋರನ ಸುಳಿವು ಅಥವಾ ಬಂಧನದ ಕುರಿತು ಪೊಲೀಸರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.
ಬೈಟ್ ಆಫ್ ಸಿಯಾಟಲ್ ಇತಿಹಾಸ: 1982 ರಲ್ಲಿ ಪ್ರಾರಂಭವಾದ ಈ ಆಹಾರ ಉತ್ಸವವು ಅಮೆರಿಕದ ಅತ್ಯಂತ ಹಳೆಯ ಮತ್ತು ದೊಡ್ಡ ಆಹಾರ ಮೇಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ.ಅಮೆರಿಕದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಡೆಯುವ ಸಾಮೂಹಿಕ ಗುಂಡಿನ ದಾಳಿಗಳು ನಿರಂತರವಾಗಿ ಕಳವಳ ಮೂಡಿಸುತ್ತಿವೆ. ‘ಗನ್ ವೈಯಲೆನ್ಸ್ ಆರ್ಕೈವ್’ ಪ್ರಕಾರ, ಪ್ರಸಕ್ತ ವರ್ಷದಲ್ಲೇ ಅಮೆರಿಕದಲ್ಲಿ ನೂರಾರು ಸಾಮೂಹಿಕ ಗುಂಡಿನ ದಾಳಿಗಳು ವರದಿಯಾಗಿವೆ. ಸಾರ್ವಜನಿಕ ಹಬ್ಬಗಳು ಹಾಗೂ ಸಭೆ-ಸಮಾವೇಶಗಳಲ್ಲಿ ಬಂದೂಕು ಹಿಡಿದು ಬರುವುದನ್ನು ತಡೆಯಲು ಮತ್ತು ಬಂದೂಕು ನಿಯಂತ್ರಣ ಕಾಯ್ದೆಗಳನ್ನು ಮತ್ತಷ್ಟು ಬಿಗಿಗೊಳಿಸಲು ಯುಎಸ್ ಸರ್ಕಾರಕ್ಕೆ ಸಾರ್ವಜನಿಕರಿಂದ ಒತ್ತಡ ಹೆಚ್ಚಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *