Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚೆನ್ನೈನಲ್ಲಿ ವಿನೂತನ ಶೈಲಿ: ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ಯುವಕನ ವಿಡಿಯೋ ವೈರಲ್

Spread the love

ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಫುಡ್ ಆರ್ಡರ್ ಮಾಡಿದ್ರೆ ಫುಡ್ ಡೆಲಿವರಿ ಬಾಯ್ (delivery boy) ಬೈಕ್ ನಲ್ಲಿ ಬಂದು ಫುಡ್ ಡೆಲಿವರಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆಹಾರ ವಿತರಣಾ ಸಿಬ್ಬಂದಿಯೂ ಕುದುರೆ ಏರಿ ಫುಡ್ ಡೆಲಿವರಿ ಮಾಡಲು ಹೋಗುತ್ತಿದ್ದಾನೆ. ಹೌದು, ಚೆನ್ನೈನ (Chennai) ಇಸಿಆರ್‌ನ ಪಲವಕ್ಕಂ ಪ್ರದೇಶದಲ್ಲಿ ಕುದುರೆ ಏರಿ ಆಹಾರ ವಿತರಿಸಲು ಹೊರಟ ಡೆಲಿವರಿ ಬಾಯ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ವಿತರಣಾ ಸಿಬ್ಬಂದಿ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.
ಐಯಮ್ ವೆಂಕಟ್_ವಿವಿಆರ್ (iamvenkat_vvr) ಹೆಸರಿನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಡೆಲಿವರಿ ಬಾಯ್ ಯೊಬ್ಬ ಕುದುರೆ ಏರಿ ಆಹಾರ ತಲುಪಿಸುತ್ತಿರುವ ದೃಶ್ಯ ಕಾಣಬಹುದು. ಚೆನ್ನೈನ ರಸ್ತೆಯಲ್ಲಿ ಕುದುರೆ ಸವಾರಿ ಮಾಡಿಕೊಂಡು ಫುಡ್‌ ಡೆಲಿವರಿ ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು.ಈ ವಿಡಿಯೋ ಇದುವರೆಗೆ 69 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಟ್ರಾಫಿಕ್ ಸಮಸ್ಯೆಯಿಲ್ಲ, ಮೈಲೇಜ್ ಚಿಂತೆಯಿಲ್ಲ, ಹುಲ್ಲು ಹಾಕಿದ್ರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನ್ಯೂ ಅಪ್ಡೇಟ್ ಎಂದಿದ್ದಾರೆ. ಮತ್ತೊಬ್ಬರು, ಪೆಟ್ರೋಲ್ ಹಾಗೂ ಹಣ ಉಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *