Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಾರಾಷ್ಟ್ರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ; ಮನನೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ!

Spread the love

ಮಹಾರಾಷ್ಟ್ರ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಕಡಿಮೆ ಅಂಕ ಬಂದಿದ್ದರಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದ ವಿದ್ಯಾರ್ಥಿನಿಯೊಬ್ಬಳು ಹೆತ್ತವರು ಹಾಗೂ ಸಹೋದರನಿಗೆ ಭಾವುಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಜಲಾಲ್ಪುರ ಗ್ರಾಮದ ನಿವಾಸಿ ಅಂಕಿತಾ ಸಾಂಗ್ಲೆ ಆತ್ಮಹತ್ಯೆಗೆ ಶರಣಾದ ದುರದೃಷ್ಟಕರ ವಿದ್ಯಾರ್ಥಿನಿ.

ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಅಂಕಿತಾ ಕೇವಲ 166 ಅಂಕಗಳನ್ನು ಗಳಿಸಿದ್ದು, ಇದರಿಂದ ಆಕೆ ತೀವ್ರ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಶನಿವಾರ ಸಂಜೆ ಸುಮಾರು 4:30 ರ ವೇಳೆಗೆ ಆಕೆ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿರುವ ಡೆತ್‌ನೋಟ್ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತರಿಸುವಂತಿದೆ. “ನೀವು ನನಗೆ ತುಂಬಾ ಪ್ರೀತಿ ಕೊಟ್ಟಿದ್ದೀರಿ, ಆದರೆ ನಿಮ್ಮ ಒಂದೇ ಒಂದು ಆಸೆಯನ್ನು ನನಗೂ ಈಡೇರಿಸಲು ಸಾಧ್ಯವಾಗಲಿಲ್ಲ. ಅಮ್ಮ, ನೀನು ಪ್ರತಿಯೊಂದು ಕಷ್ಟದಲ್ಲೂ ನನ್ನ ಜೊತೆ ಸ್ನೇಹಿತೆಯಂತೆ ನಿಂತೆ. ಅಣ್ಣ, ನೀನು ಕೂಡ ನನಗೆ ತುಂಬಾ ಸಪೋರ್ಟ್ ಮಾಡಿದೆ. ಅಮ್ಮ-ಅಪ್ಪನಿಗಿಂತಲೂ ನನ್ನನ್ನು ಹೆಚ್ಚು ಪ್ರೀತಿಸಿದೆ. ನನ್ನ ಈ ನಿರ್ಧಾರಕ್ಕೆ ಯಾರೂ ಕಾರಣರಲ್ಲ” ಎಂದು ಬರೆದಿದ್ದಾಳೆ.

ಅಲ್ಲದೆ, “ನಾನು ನೀಟ್‌ಗೆ ಓದುತ್ತಿದ್ದಾಗಲೂ ನೀವು ನನಗಾಗಿ ಪ್ರತಿಯೊಂದನ್ನೂ ತ್ಯಾಗ ಮಾಡಿದ್ದೀರಿ. ಆದರೆ ನಾನು ವಿಫಲನಾದೆ, ನಿಮ್ಮ ಆಸೆಗಳನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅಣ್ಣ, ದಯವಿಟ್ಟು ಅಮ್ಮ ಮತ್ತು ಅಪ್ಪನನ್ನು ಚೆನ್ನಾಗಿ ನೋಡಿಕೋ. ಅವರಿಗೆ ಯಾವುದೇ ಕೊರತೆಯಾಗಲು ಬಿಡಬೇಡ” ಎಂದು ಸಹೋದರನಲ್ಲಿ ವಿನಂತಿಸಿಕೊಂಡಿದ್ದಾಳೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಅಸಹಜ ಸಾವು (Accidental Death) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *