ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣ: ಅಂತಿಮ ಮತದಾರರ ಪಟ್ಟಿ ಬಿಡುಗಡೆ!

ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯದಲ್ಲಿ ಒಟ್ಟು 4,55,00,011 ಮತದಾರರು ಇದ್ದಾರೆ.
ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು. ಈಗ ಅಂತಿಮ ಪಟ್ಟಿ ಹೊರಬಿದ್ದಿದ್ದು, 4,55,00,011 ಮತದಾರರು ಇದ್ದಾರೆ. ಮಹಿಳೆಯರು- 2,29,14,063 ಹಾಗೂ ಪುರುಷರು 2,25,83,107 ಮತದಾರರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದರು.
10,62,336 ರಷ್ಟು ಫಾರ್ಮ್-6 ಬಂದಿದೆ. 2 ಲಕ್ಷದಷ್ಟು ಫಾರ್ಮ್-7 ಬಂದಿದೆ. ರಾಜ್ಯದಲ್ಲಿ ಮಹಿಳಾ ಮತದಾರರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರಿಗೆ ಕೊಕ್ ನೀಡಲಾಗಿದೆ.ಎಸ್‌ಐಆರ್‌ಗೂ ಮುನ್ನ ಬೆಂಗಳೂರಲ್ಲಿ 1.3 ಕೋಟಿ ಮತದಾರರು ಇದ್ದರು. ಆದರೆ, SIR ಮುಗಿದ ಬಳಿಕ 59,08,151 ಮತದಾರರು ಇದ್ದಾರೆ. ಡಿಲೀಟ್ ಆದ ಮತದಾರರ ಸಂಖ್ಯೆ 48,00,565 ಆಗಿದೆ.
