Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶ್ವಕಪ್ ಫುಟ್‌ಬಾಲ್ ವಿವಾದ: ಅರ್ಜೆಂಟೀನಾ ವಿರುದ್ಧ ತಾರತಮ್ಯದ ಆರೋಪ ಹೊರಿಸಿದ ಈಜಿಪ್ಟ್ ತಂಡ!

Spread the love

ಮಂಗಳವಾರ ಜುಲೈ 7ರಂದು ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಲಿಯೊನೆಲ್ ಮೆಸ್ಸಿ ಅವರ ಅರ್ಜೆಂಟಿನಾ ತಂಡದ ವಿರುದ್ಧ 3-2 ಅಂತರದಿಂದ ಸೋತ ನಂತರ ಈಜಿಪ್ಟ್ ತಾರತಮ್ಯದ ಆರೋಪ ಹೊರಿಸಿದೆ. ಅರ್ಜೆಂಟಿನಾ ತಂಡವು ಪ್ರತಿ ಹಂತದಲ್ಲೂ ಎಲ್ಲಾ ಕಡೆಯಿಂದ ಬೆಂಬಲ ಪಡೆದಿದೆ ಎಂದು ಈಜಿಪ್ಟ್ ತಂಡದ ತರಬೇತುದಾರ ಹೊಸಮ್ ಹಸನ್ ಹೇಳಿದ್ದಾರೆ.
2-0 ಮುನ್ನಡೆ ಸಾಧಿಸಿ ಕೊನೆಯ ಹಂತದವರೆಗೆ ನಿಯಂತ್ರಣದಲ್ಲಿದ್ದ ಈಜಿಪ್ಟ್, ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಘಾತ ತರುವ ನಿರೀಕ್ಷೆಯಲ್ಲಿತ್ತು. ಆದರೆ ಅರ್ಜೆಂಟಿನಾ ಬೆರಗುಗೊಳಿಸುವ ರೀತಿಯಲ್ಲಿ ಪುನರಾಗಮನ ಸಾಧಿಸಿತು. ಕ್ರಿಸ್ಟಿಯನ್ ರೊಮೆರೊ, ಮೆಸ್ಸಿ ಮತ್ತು ಎಂಜೊ ಫೆರ್ನಾಂಡಿಸ್ 13 ನಿಮಿಷಗಳಲ್ಲಿ ಮೂರು ಗೋಲುಗಳನ್ನು ಗಳಿಸಿ 3-2 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದರು.

ಹೀಗೆ ಕೊನೆಕ್ಷಣದಲ್ಲಿ ಸೋಲು ಅನುಭವಿಸಿದ ಈಜಿಪ್ಟ್ ತಂಡ ಆಕ್ರೋಶ ವ್ಯಕ್ತಪಡಿಸಿ, “ನಮ್ಮ ತಂಡ ವಿಶ್ವ ಚಾಂಪಿಯನ್ ಗಳನ್ನು ಮೀರಿಸಿತ್ತು. ಆದರೆ ಫಲಿತಾಂಶವು ಫುಟ್ಬಾಲ್ ನ ಆಚೆಗಿನ ಅಂಶಗಳಿಂದ ಪ್ರಭಾವಿತವಾಗಿದೆ” ಎಂದು ಹೇಳಿದೆ. “ನಾವು ಹಾಲಿ ಚಾಂಪಿಯನ್ ಗಳಿಗಿಂತ ಉತ್ತಮವಾಗಿ ಕಾಣುತ್ತಿದ್ದೆವು. ಎಲ್ಲಾ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಮೈದಾನದ ಆಚೆಗಿನ ಅಂಶಗಳಿಂದ ಪಂದ್ಯ ಪ್ರಭಾವಿತವಾಗಿದೆ” ಎಂದು ಹಸನ್ ಹೇಳಿದ್ದಾರೆ.
“ಬಹುಶಃ ಫಿಫಾ ವಿಶ್ವ ಚಾಂಪಿಯನ್ ತಂಡವನ್ನು ಸ್ಪರ್ಧೆಯಲ್ಲಿ ಉಳಿಸಿಕೊಳ್ಳಲು ಬಯಸಿದ್ದರು. ಮೆಸ್ಸಿ ಸ್ಪರ್ಧೆಯಲ್ಲಿ ಉಳಿಯಬೇಕು ಎಂದು ಬಯಸಿದ್ದರು. ಫುಟ್ಬಾಲ್ ನಲ್ಲಿ ಕೆಲವೊಮ್ಮೆ ತಾಂತ್ರಿಕ ಅಂಶಗಳನ್ನು ಮೀರಿದ ಬಾಹ್ಯ ಅಂಶಗಳಿರುತ್ತವೆ. ವಿಶ್ವ ಚಾಂಪಿಯನ್ ಗೆ ಪ್ರತಿ ಹಂತದಲ್ಲೂ ಬೆಂಬಲ ದೊರೆತಿದೆ” ಎಂದು ಹಸನ್ ಅಭಿಪ್ರಾಯಪಟ್ಟಿದ್ದಾರೆ.ವಿವಾದಾತ್ಮಕ VAR (ವೀಡಿಯೊ ಅಸಿಸ್ಟಂಟ್ ರೆಫ್ರಿ) ನಿರ್ಧಾರವು ಈಜಿಪ್ಟ್ ನ ಆಕ್ರೋಶಕ್ಕೆ ಕಾರಣವಾಗಿದೆ. 59ನೇ ನಿಮಿಷದಲ್ಲಿ ಮುಸ್ತಫಾ ಜಿಕೊ ಅವರ ಗೋಲನ್ನು VAR ರದ್ದುಗೊಳಿಸಿದ ನಿರ್ಧಾರವು ಪಂದ್ಯದ ಹಾದಿಯನ್ನು ಬದಲಿಸಿತು. ಮುಹಮ್ಮದ್ ಸಲಾಹ್ ವಿರುದ್ಧ ಬಾಕ್ಸ್ ಒಳಗೆ ಫೌಲ್ ಆಗಿ ಕಾಣಿಸಿಕೊಂಡ ನಂತರ ಪೆನಾಲ್ಟಿ ನೀಡದಿರುವುದೂ ಈಜಿಪ್ಟ್ ಅನ್ನು ಕೆರಳಿಸಿದೆ. ಎಂಜೊ ಫೆರ್ನಾಂಡಿಸ್‌ ಅವರ ಸ್ಟಾಪೇಜ್ ಟೈಮ್ ನಲ್ಲಿ ವಿಜಯದ ಗೋಲು ಭಾರಿಸಿದ ಸಂದರ್ಭದಲ್ಲಿ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಈ ಫೌಲ್ ಮಾಡಿದ್ದರು. ಆದರೆ VAR ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ.

“ಈ ಫಲಿತಾಂಶದ ಮೇಲೆ ಅರ್ಜೆಂಟೀನಾ ಕಡೆಯಿಂದ ಒತ್ತಡ ಇರುವಂತೆ ತೋರುತ್ತಿದೆ. ಫ್ರೆಂಚ್ ಕಾರಣದಿಂದಾಗಿ ನಾವು ರೆಫ್ರಿಯ ಆಯ್ಕೆಗೆ (2022ರ ವಿಶ್ವಕಪ್ ನ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ಫ್ರಾನ್ಸ್ ಅನ್ನು ಸೋಲಿಸಿತ್ತು) ಆಕ್ಷೇಪ ವ್ಯಕ್ತಪಡಿಸುತ್ತಿದ್ದೆವು. ಆದರೆ ಎಲ್ಲರೂ ಒಂದು ಹಂತದಲ್ಲಿ ಸಹಿಸಿಕೊಳ್ಳಲೇಬೇಕಾಗುತ್ತದೆ. ನಮ್ಮದೂ ಅದೇ ಸ್ಥಿತಿಯಾಗಿದೆ. ಇಲ್ಲಿ ನ್ಯಾಯಯುತವಾದ ಆಟವನ್ನು ನಾವು ಕಂಡಿಲ್ಲ. ಪೆನಾಲ್ಟಿ ನೀಡಲಾಗಿಲ್ಲ. VAR ಸಹ ಪರಿಶೀಲಿಸಲಿಲ್ಲ. ನಮ್ಮ ಎರಡನೇ ಗೋಲು ರದ್ದುಗೊಳಿಸಲಾಯಿತು” ಎಂದು ಅವರು ಆರೋಪಿಸಿದ್ದಾರೆ.

“ನಮಗೆ ಅನ್ಯಾಯವಾಗಿದೆ ಮತ್ತು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಪಂದ್ಯಾವಳಿ ಬಗ್ಗೆಯೇ ನಿರಾಶೆಯಾಗಿದೆ. ಇನ್ನೆಂದಿಗೂ ವಿಶ್ವಕಪ್ ಅನ್ನು ನೋಡುವುದಿಲ್ಲ” ಎಂದು ಹಸನ್ ಹೇಳಿದ್ದಾರೆ.
“ಅರ್ಜೆಂಟೀನಾ ಅನರ್ಹ ಗೆಲುವು ಸಾಧಿಸಿದೆ ಎಂದು ನಾನು ರೆಫ್ರಿಗೆ ಹೇಳಿದ್ದೇನೆ. ತವರಿಗೆ ಮರಳಿದ ನಂತರ ಎಂದಿಗೂ ವಿಶ್ವಕಪ್ ವೀಕ್ಷಿಸುವುದಿಲ್ಲ. ಏಕೆಂದರೆ ಪಂದ್ಯಾವಳಿಯಲ್ಲಿ ನ್ಯಾಯವೇ ಇಲ್ಲ” ಎಂದು ಅವರು ಹೇಳಿದ್ದಾರೆ.
ಹಸನ್ ಅವರ ಆರೋಪಗಳು ಮತ್ತು ಸಂಪೂರ್ಣ ಪಂದ್ಯದಲ್ಲಿ ಅರ್ಜೆಂಟೀನಾ ಮರಳಿದ ರೀತಿಯನ್ನು ಫುಟ್‌ಬಾಲ್ ವೃತ್ತಿಪರರು ಚರ್ಚೆ ಮಾಡುತ್ತಿದ್ದಾರೆ. ಈಜಿಪ್ಟ್ಗೆ ಅನ್ಯಾಯವಾಗಿದೆ ಎಂದು ಹಲವು ಫುಟ್‌ಬಾಲ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದ ರೆಫ್ರಿ ಫ್ರಾಂಕೊಯಿಸ್ ಲೆಟೆಕ್ಸಿಯರ್ ಇದೀಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಪಂದ್ಯದ ಮೊದಲ ಹಂತದಲ್ಲಿ ಅರ್ಜೆಂಟೀನಾದ ನ್ಯಾಹುವೆಲ್ ಮೊಲಿನಾ ಈಜಿಪ್ಟ್ನ ಇಮಾಮ್ ಅಶೌರ್ ವಿರುದ್ಧ ಫೌಲ್ ಮಾಡಿದ್ದರು. ಆದರೆ ಇದಕ್ಕೆ ಮೊಲಿನಾ ಅವರಿಗೆ ಶಿಕ್ಷೆ ವಿಧಿಸಲಾಗಿಲ್ಲ. ಚರ್ಚೆಗೆ ಗ್ರಾಸವಾದ ಮತ್ತೊಂದು ನಿರ್ಧಾರವೆಂದರೆ ಎರಡನೇ ಅರ್ಧದಲ್ಲಿ ಮೊಹಮದ್ ಸಲಾಹ್ ಅರ್ಜೆಂಟೀನಾದ ಬಾಕ್ಸ್‌ನಲ್ಲಿ ಕೆಳಗೆ ಬಿದ್ದರೂ ಅದನ್ನು ಪರಿಶೀಲಿಸಲಾಗಿಲ್ಲ. ವೀಡಿಯೊ ಮರುಪ್ರಸಾರಗಳಲ್ಲಿ ನಿಕೊಲಾಸ್ ಟ್ಯಾಗ್‌ಲಿಯಫಿಕೊ ಅವರು ಸಲಾಹ್ ರನ್ನು ಕಾಳೆರಳಿನಿಂದ ಹೊಡೆದಿರಬಹುದು ಎಂದು ಕಂಡುಬಂದಿದೆ. ಹೀಗೆ ಈಜಿಪ್ಟ್ನ ಆಟಗಾರ ಹಿಡಿತ ತಪ್ಪಿ ಕೆಳಗೆ ಬೀಳುವಂತೆ ಮಾಡಲಾಗಿತ್ತು.

ಈ ಘಟನೆಗಳು ಅಭಿಮಾನಿಗಳು, ಪತ್ರಕರ್ತರು ಮತ್ತು ಮಾಜಿ ಆಟಗಾರರ ನಡುವೆ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳು ಅರ್ಜೆಂಟೀನಾ ಪರವಾಗಿದ್ದಾರೆ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನು ಕೆಲವರು ರೆಫ್ರಿಯ ನಿರ್ಧಾರವನ್ನು ಸ್ವಾಗತಿಸಿ ಸಮರ್ಥಿಸಿಕೊಳ್ಳುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *