Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಟಪದಿಂದಲೇ ವರನ ಪರಾರಿ; ವಧುವಿನ ಹಳೆಯ ಗೆಳತನದ ಫೋಟೋ ವೈರಲ್!

Spread the love

ಕೈಥಾಲ್: ಮದುವೆ(Marriage) ಶಾಸ್ತ್ರಗಳು ಮುಗಿದು ಇನ್ನೇನು ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ವರನೊಬ್ಬ ಮಂಟಪದಿಂದಲೇ ದಿಢೀರ್ ಓಡಿಹೋಗಿರುವ ವಿಚಿತ್ರ ಘಟನೆ ಹರಿಯಾಣದ ಕೈಥಾಲ್ ಜಿಲ್ಲೆಯಲ್ಲಿ ನಡೆದಿದೆ. ವರನ ಹಿಂದೆಯೇ ವಧು ಮತ್ತು ಆಕೆಯ ಕುಟುಂಬದವರು ಓಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ನಡೆದಿದ್ದೇನು? ಮದುವೆ ಸಮಾರಂಭ ಅತ್ಯಂತ ಸಂಭ್ರಮದಿಂದ ನಡೆಯುತ್ತಿತ್ತು. ವಧು-ವರರಿಬ್ಬರೂ ಮಂಟಪದಲ್ಲಿದ್ದರು. ಈ ವೇಳೆ ವರನ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಒಂದು ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ, ನೀನು ಮದುವೆಯಾಗುತ್ತಿರುವ ಹುಡುಗಿ ನನ್ನ ಹಳೆಯ ಗೆಳತಿ ಎಂದು ಹೇಳಿದ್ದಲ್ಲದೆ, ಅದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳನ್ನು ವರನ ವಾಟ್ಸಾಪ್‌ಗೆ ಕಳುಹಿಸಿದ್ದಾನೆ.
ಮಂಟಪದಿಂದಲೇ ಕಾಲ್ಕಿತ್ತ ವರ ಮೊಬೈಲ್‌ನಲ್ಲಿ ಆ ಫೋಟೋಗಳನ್ನು ನೋಡುತ್ತಿದ್ದಂತೆ ವರನಿಗೆ ಶಾಕ್ ಆಗಿದೆ. ಆತ ಮರುಕ್ಷಣವೇ ಮದುವೆ ಬೇಡ ಎಂದು ಮಂಟಪದಿಂದ ಹೊರಗೆ ಓಡಲಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ವಧು, ಆಕೆಯ ಪೋಷಕರು ಮತ್ತು ಮದುವೆಗೆ ಬಂದಿದ್ದ ಅತಿಥಿಗಳು ವರನನ್ನು ತಡೆಯಲು ಆತನ ಹಿಂದೆಯೇ ರಸ್ತೆಯಲ್ಲಿ ಓಡಿದ್ದಾರೆ.ಈ ಹೈಡ್ರಾಮಾದ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ನೆಟಿಜನ್‌ಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸದ್ಯ ಈ ಕುರಿತು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *